ಉದ್ಯೋಗ ಸಮಾಚಾರ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 3 ಅಂಗನವಾಡಿ ಕಾರ್ಯಕರ್ತೆ ಹಾಗೂ 9 ಅಂಗನವಾಡಿ ಸಹಾಯಕಿಯರು ಸೋಮವಾರಪೇಟೆ ತಾಲ್ಲೂಕಿನ 16 ಅಂಗನವಾಡಿ ಸಹಾಯಕಿಯರು ಮತ್ತು ಪೊನ್ನಂಪೇಟೆ ತಾಲ್ಲೂಕಿನ 9 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 25 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಆನ್‍ಲೈನ್ ಮೂಲಕ ಭರ್ತಿ ಮಾಡಲು (Jobs In Kodagu) ಅರ್ಜಿ ಆಹ್ವಾನಿಸಲಾಗಿದೆ.
ಹಾಗಾದರೆ ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ? ಈ ಕೆಲಸಗಳ ವಿವರಗಳೇನು? ಸಂಬಳ ಎಷ್ಟಿರುತ್ತೆ? ಏನೆಲ್ಲ ಜವಾಬ್ದಾರಿಗಳಿರುತ್ತೆ? ಎಲ್ಲ ವಿವರ ಇಲ್ಲಿದೆ ನೋಡಿ.
ಹುದ್ದೆಯ ಹೆಸರು: ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು
ಸ್ಥಳ: ಮಡಿಕೇರಿಯ ಸೋಮವಾರಪೇಟೆ ಮತ್ತು ಪೊನ್ನಂಪೇಟೆ
ಕೊನೆಯ ದಿನಾಂಕ: ಸೆಪ್ಟೆಂಬರ್ 15
ಅರ್ಹತೆ: ಕಾರ್ಯಕರ್ತೆ ಹುದ್ದೆಗ 10ನೇ ತರಗತಿ, ಸಹಾಯಕಿ ಹುದ್ದೆಗೆ 4ರಿಂದ 9ನೇ ತರಗತಿ
ವಯೋಮಿತಿ: 18 ರಿಂದ 35 ವರ್ಷದ ಸ್ಥಳೀಯರು
ಹೇಗೆ ಅರ್ಜಿ ಸಲ್ಲಿಸಬೇಕು? ಇಲ್ಲಿ ಕ್ಲಿಕ್ ಮಾಡಿ -https://anganwadirecruit.kar.nic.in/
ಸಂಪರ್ಕ ಸಂಖ್ಯೆ: ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- 08272-298379