Ad Widget .

ಉಪ್ಪಿನಂಗಡಿ: ವಿದ್ಯಾರ್ಥಿನಿಗೆ ಇನ್ಸ್ಟಾಗ್ರಾಮ್ ನಲ್ಲಿ ಮೆಸೇಜ್ ಮಾಡಿದ ಯುವಕ ಪೊಲೀಸ್ ಠಾಣೆಗೆ| ರೀಚಾರ್ಜ್ ಮಾಡಿಸಿದ ಯುವತಿಯರಿಗೆ ಮೆಸೇಜ್..!

ಉಪ್ಪಿನಂಗಡಿ: ವಿದ್ಯಾರ್ಥಿನಿಯೋರ್ವಳಿಗೆ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

Ad Widget . Ad Widget .

ಇಲ್ಲಿನ ಕರುವೇಲು ನಿವಾಸಿಯೊಬ್ಬ ಖಾಸಗಿ ಶಾಲೆಯ ವಿದ್ಯಾರ್ಥಿನಿಗೆ ಇನ್ ಸ್ಟ್ಯಾಗ್ರಾಂನಲ್ಲಿ ಮೆಸೇಜ್ ಮಾಡುತ್ತಿದ್ದು, ಇದನ್ನು ಈಕೆ ಹೆತ್ತವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

Ad Widget . Ad Widget .

ಏನಿದು ಆರೋಪ..?
ಉಪ್ಪಿನಂಗಡಿಯ ಹೊಸ ಬಸ್‌ ನಿಲ್ದಾಣದಲ್ಲಿನ ಝನ್ ಟೆಲಿಕಾಂ ಮೊಬೈಲ್ ಅಂಗಡಿನಲ್ಲಿ ಕೆಲಸ ಮಾಡುವ ಕರುವೇಲು ಸಮೀಪದ ಸಮೀರ್ ಎಂಬಾತ ರೀಚಾರ್ಜ್ ಮಾಡಲು ಬರುವ ಹಿಂದೂ ಯುವತಿಯರ, ಮಹಿಳೆಯರ ಮೊಬೈಲ್ ನಂಬರನ್ನು ಪಡೆದು ಕಾಲ್ ಮೆಸೇಜ್ ಮಾಡಿರುವುದು ಕೇಳಿ ಬಂದಿದೆ. ಅದಲ್ಲದೆ instagram ಮೂಲಕ ಹಿಂದೂ ಯುವತಿಯರ ಹೆಸರನ್ನು ತಿಳಿದುಕೊಂಡು ಮಸೇಜ್ ಮಾಡಿ ಅವರನ್ನು ಪುಸಲಾಯಿಸಿ ಮೊಬೈಲ್ ನಂಬರ್ ಪಡೆದುಕೊಂಡು ಮೆಸೇಜ್, ಫೋನ್ ಮಾಡುವ ಚಾಳಿ ಬೆಳೆಸಿಕೊಂಡಿದ್ದ ಎಂಬ ಆರೋಪ ಈತನ ಮೇಲೆ ಕೇಳಿ ಬಂದಿದೆ.

Leave a Comment

Your email address will not be published. Required fields are marked *