ಅದಾನಿ ಏರ್ಪೋರ್ಟ್ಸ್ ಒಡೆತನದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಎಂಐಎ) ದೇಶೀಯ ಬಳಕೆದಾರ ಅಭಿವೃದ್ಧಿ ಶುಲ್ಕವನ್ನು ತಕ್ಷಣವೇ 100 ರೂಪಾಯಿ ಹೆಚ್ಚಿಸುವಂತೆ ಸರ್ಕಾರವನ್ನು ಕೋರಿದೆ.
ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರವು ಶುಲ್ಕ ನಿಗದಿ ಮಾಡುವ ಸಂಸ್ಥೆಯಾಗಿದ್ದು, ಮಂಗಳೂರು ವಿಮಾನ ನಿಲ್ದಾಣದ ಶುಲ್ಕ ನಿಗದಿಪಡಿಸುವ ಪ್ರಕ್ರಿಯೆಯಲ್ಲಿದೆ. ಈ ಅಕ್ಟೋಬರ್ನಿಂದ ದೇಶೀಯ ಪ್ರಯಾಣಿಕರಿಗೆ 250 ರೂಪಾಯಿಗಳ ಶುಲ್ಕ ವಿಧಿಸಲು ಪ್ರಯತ್ನಿಸಿದೆ
ಅದಾನಿ ಗ್ರೂಪ್ ಅಕ್ಟೋಬರ್ 31, 2020ರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ವಹಿಸಿಕೊಂಡಿದೆ. ರನ್ವೇಯ ರಿಕಾರ್ಪೆಟಿಂಗ್ ಮತ್ತು ಹೊಸ ಟರ್ಮಿನಲ್ ಕಟ್ಟಡ ಮತ್ತು ಕಾರ್ಗೋ ಟರ್ಮಿನಲ್ ನಿರ್ಮಾಣ ಸೇರಿದಂತೆ ಪ್ರಸ್ತಾವಿತ ಅಭಿವೃದ್ಧಿ ಯೋಜನೆಗಳಿಗೆ ಸುಮಾರು 5,200 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ 2026ರ ಅವಧಿಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ 525 ರೂಪಾಯಿಗಳಿಂದ 1,200 ರೂಪಾಯಿಗಳಿಗೆ ಶುಲ್ಕ ಹೆಚ್ಚಿಸಲು ಪ್ರಯತ್ನಿಸಿದೆ.