Ad Widget .

ಮಂಗಳೂರಿಗೆ ಮೋದಿ ಭೇಟಿ ವೇಳೆ ಸಂಸದ ನಳಿನ್ ವಿರುದ್ದ ಜನಾಕ್ರೋಶಕ್ಕೆ ಸಿದ್ದತೆ

ಸಮಗ್ರ ನ್ಯೂಸ್: ಸೆಪ್ಟೆಂಬರ್ 2.ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ನವ ಮಂಗಳೂರು ಬಂದರಿನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಂಗಳೂರು ನಗರ ಹೊರವಲಯದ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.

Ad Widget . Ad Widget .

ಮೋದಿ ಸ್ವಾಗತಕ್ಕೆ ಹಿಂದುತ್ವದ ಭದ್ರಕೋಟೆ ಸಜ್ಜಾದರೂ ಇದೇ ಮೊದಲ ಬಾರಿಗೆ ಸ್ವಾಗತದ ಜೊತೆಗೆ ಬದಲಾವಣೆಯ ಅಭಿಯಾನ ಜೋರಾಗಿದೆ.

Ad Widget . Ad Widget .

ಬಿಜೆಪಿ ಕಾರ್ಯಕರ್ತರ ನೆಚ್ಚಿನ ‘ಪೋಸ್ಟ್ ಕಾರ್ಡ್’ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ನೇರ ಅಭಿಯಾನಕ್ಕೆ ಕೈ ಹಾಕಿದೆ. ಮಹೇಶ್ ವಿಕ್ರಂ‌ ಹೆಗ್ಡೆ ನೇತೃತ್ವದ ಪೋಸ್ಟ್ ಕಾರ್ಡ್ ಈ ಕುರಿತ ಪೋಸ್ಟ್ ಹಾಕಿದೆ.

ನಾವು ಮಂಗಳೂರಿಗರು ದೇಶದಲ್ಲೇ ಹಿಂದುತ್ವದ ಭದ್ರಕೋಟೆಯಾಗಿ ಕರಾವಳಿಯನ್ನು ಕಟ್ಟಿಕೊಂಡವರು, ನಮಗೆ ಹಿಂದುತ್ವದ ಜೊತೆಗೆ ಮಂಗಳೂರಿನ ಅಭಿವೃದ್ಧಿಯ ದೃಷ್ಟಿಕೋನ‌ ಹೊಂದಿರುವ ನಾಯಕನ ಅಗತ್ಯವಿದೆ. ಸೆಪ್ಟೆಂಬರ್ 2-ಮೋದಿಯನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೊದಲು ನಮ್ಮ‌ ಜಿಲ್ಲೆಯ ಸಂಸದರ ಬದಲಾವಣೆಯ ಕೂಗು ಕೇಳಿಬರಲಿ ಎಂದು ಪೋಸ್ಟ್ ಹಾಕಲಾಗಿದೆ.

ಇನ್ನು ‘ನಮೋ ಕರುನಾಡು’ ಎನ್ನುವ ಪೇಜ್ ಕೂಡಾ ಈ ಬಗ್ಗೆ ಪೋಸ್ಟ್ ಹಾಕಿದೆ. ತುಳುವರೇ ಮೋದಿ ಮಂಗಳೂರಿಗೆ ಬರುತ್ತಿದ್ದಾರೆ. ವಿಶ್ವ ನಾಯಕನನ್ನು ಸ್ವಾಗತಿಸುವ ಜೊತೆಗೆ ದುರ್ಬಲ ಸಂಸದ, ರಾಜ್ಯಾಧ್ಯಕ್ಷರನ್ನು ಬದಲಾಯಿಸಲು ಒತ್ತಾಯಿಸೋಣ. ನಿಮಗೆ ಗೊತ್ತಿರುವ ಎಲ್ಲಾ ಭಾಷೆಯಲ್ಲಿ ಟ್ವಿಟ್ಟರ್, ಫೇಸ್ ಬುಕ್ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಮೋದಿಜೀಯನ್ನು ಒತ್ತಾಯಿಸೋಣ. ಮಂಗಳೂರನ್ನು ದೇಶದ ನಂಬರ್ ಒನ್ ಪ್ರವಾಸೋದ್ಯಮ ಸ್ಥಳವನ್ನಾಗಿ ಪರಿವರ್ತಿಸಲು ಸಂಸದರ ಪರಿವರ್ತನೆ ಅತ್ಯಗತ್ಯವಿದೆ. ನಮ್ಮ ಈ ಒಂದು ಮನವಿ ಯಾವ ರೀತಿಯ ಬದಲಾವಣೆಗೆ ಕಾರಣವಾಗಲಿದೆ ನೀವೇ ಯೋಚಿಸಿ ಎಂದು ಫೋಸ್ಟ್ ಮಾಡಲಾಗಿದೆ.

Leave a Comment

Your email address will not be published. Required fields are marked *