Ad Widget .

ಸಹಾಯ ಕೇಳಿ ಬಂದಾಕೆಯಿಂದ ವಿಡಿಯೋ ಮಾಡಿ ಹನಿಟ್ರ್ಯಾಪ್| ‘ನಿಧಿ’ ಗೆ ಖೆಡ್ಡಾ ತೋಡಿದ ಮದನಾರಿ!

ಸಮಗ್ರ ನ್ಯೂಸ್: ಕೆಲವು ಖತರ್ನಾಕ್ ಗ್ಯಾಂಗ್ ಗಳು ದುಡ್ಡು ಇರುವವರನ್ನು ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಮಾಡುವ ಪ್ರವೃತ್ತಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇಂತದ್ದೇ ಒಂದು ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಸಹಾಯ ಕೇಳಿ ಬಂದ ಮಹಿಳೆಯೊಬ್ಬಳು ಚಿನ್ನದಂಗಡಿಯ ಮಾಲೀಕನಿಗೆ ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಿ 50 ಲಕ್ಷ ರೂಪಾಯಿ ಹಣ ಪೀಕಿ ಪೊಲೀಸರ ಅತಿಥಿಯಾಗಿದ್ದಾಳೆ.

Ad Widget . Ad Widget .

ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಸಲ್ಮಾಭಾನು ಎಂಬಾಕೆ, ಇದೀಗ ಮಂಡ್ಯದ ಶ್ರೀನಿಧಿ ಗೋಲ್ಡ್ ಚಿನ್ನದಂಗಡಿಯ ಮಾಲೀಲಿಕ ಜಗನ್ನಾಥ್ ಶೆಟ್ಟಿಗೆ ಬ್ಲಾಕ್‌ ಮೇಲ್ ಮಾಡಿ 50 ಲಕ್ಷ ದೋಚಿ ಪೊಲೀಸರ ಅತಿಥಿಯಾಗಿದ್ದಾಳೆ. ಸಲ್ಮಾ ಭಾನು ಕೆಲ ಸಂಘಟನೆಗಳೊಂದಿಗೆ ಹೋರಾಟ ಮಾಡುವುದಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಈಕೆ ವಿರುದ್ಧ ಕೆಲ ವರ್ಷಗಳ ಹಿಂದೆ ಬ್ಲಾಕ್ ಮೇಲ್ ಆರೋಪವು ಸಹ ಇತ್ತು. ಇದೀಗ ಮತ್ತೆ ಅದೇ ರೀತಿಯ ಬ್ಲಾಕ್ ಮೇಲ್ ಆರೋಪ ಕೇಳಿ ಬಂದಿರುವ ಕಾರಣ ಈಕೆಯನ್ನು ಮಂಡ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

Ad Widget . Ad Widget .

ಮಂಡ್ಯದ ಶ್ರೀನಿಧಿ ಗೋಲ್ಡ್‌ನ ಮಾಲೀಕ ಜಗನ್ನಾಥ್ ಶೆಟ್ಟಿ ಅವರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿರುವ ಆಧಾರದ ಮೇಲೆ ಇದೀಗ ತನಿಖೆ ನಡೆಯುತ್ತಿದೆ. ಕಳೆದ ಫೆಬ್ರವರಿ 26 ರಂದು ಮೈಸೂರಿನಿಂದ ಮಂಗಳೂರಿಗೆ ತೆರಳಲು ರಾತ್ರಿ 10 ಗಂಟೆಯ ಬಸ್‌ಗೆ ಟಿಕೆಟ್ ಬುಕ್ ಮಾಡಿದ್ದಾರೆ. ಹೀಗಾಗಿ ಅಂದು ಮಂಡ್ಯದಿಂದ ಮೈಸೂರಿಗೆ ತೆರಳಲು ಮಂಡ್ಯದ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಜಗನ್ನಾಥ್ ಶೆಟ್ಟಿ ಕಾಯುತ್ತಿದ್ದು, ಈ ವೇಳೆ ಒಂದು ಕಾರು ಬಂದು ಅವರ ಬಳಿ ಬಂದು ನಿಂತುಕೊಳ್ಳುತ್ತದೆ. ಕಾರಿನಲ್ಲಿ ಸಲ್ಮಾ ಭಾನು ಹಾಗೂ ಇಬ್ಬರು ಪುರುಷರು ಇದ್ದು, ಆಗ ಕಾರಿನಲ್ಲಿದ್ದವರು ನೀವು ಶ್ರೀನಿಧಿ ಗೋಲ್ಡ್ ಮಾಲೀಕರು ಅಲ್ವಾ ಎಂದು ಪರಿಚಯ ಇರುವವರ ಹಾಗೆ ಮಾತನಾಡುತ್ತಾರೆ.

ನಂತರ ನಾವು ಮೈಸೂರಿಗೆ ಹೋಗ್ತಾ ಇದೀವಿ ಬನ್ನಿ ಎಂದು ಕರೆದುಕೊಂಡು ಹೋಗ್ತಾರೆ. ಮಾರ್ಗ ಮಧ್ಯ ಸಲ್ಮಾ ಭಾನು ಮೈಸೂರಿನ ಹೊಟೇಲ್‌ವೊಂದರಲ್ಲಿ ನಮ್ಮ ಪರಿಚಯಸ್ಥರು ಗೋಲ್ಡ್ ಬಿಸ್ಕೇಟ್ ತಂದಿದ್ದಾರೆ ಅದು ಅಸಲಿಯೋ ಅಥವಾ ನಕಲಿಯೋ‌ ನಮಗೆ ಗೊತ್ತಿಲ್ಲ ಬಂದು ನೋಡಿ ಹೇಳಿ ಎನ್ನುತ್ತಾಳೆ. ಆರಂಭದಲ್ಲಿ ಜಗನ್ನಾಥ್ ಶೆಟ್ಟಿ ಬರುವುದಕ್ಕೆ ನಿರಾಕರಿಸಿದರಾದರೂ ನಂತರ ಸಲ್ಮಾ ಭಾನು ಪುಸಲಾಯಿಸಿ ಹೊಟೇಲ್‌ಗೆ ಕರೆದುಕೊಂಡು ಹೋಗ್ತಾಳೆ.

ಹೊಟೇಲ್‌ನ ರೂಂ ಪ್ರವೇಶ ಮಾಡುತ್ತಿದ್ದಂತೆ ಶೆಟ್ಟರ ಜೊತೆ ಬಂದಿದ್ದ ಸಲ್ಮಾ ಭಾನು ಹಾಗೂ ಪುರುಷರು ಮರೆಯಾಗುತ್ತರೆ‌. ಈ ವೇಳೆ ರೂಂನಲ್ಲಿ 26 ವರ್ಷದ ಯುವತಿ ಇರುತ್ತಾಳೆ‌. ಇದಾದ ನಂತರ ಜಗನ್ನಾಥ್ ಶೆಟ್ಟಿ ಮತ್ತು ಯುವತಿ ರೂಂನಲ್ಲಿರುವ ವಿಡಿಯೋವನ್ನು ಚಿತ್ರೀಕರಣ ಮಾಡಿ 4 ಕೋಟಿ ಕೊಟ್ಟರೆ ಸರಿ ಇಲ್ಲದಿದ್ದರೆ ಈ ವಿಡಿಯೋವನ್ನು ಹರಿಬಿಡುವುದಾಗಿ ಬೆದರಿಕೆಯಾಕುತ್ತಾರೆ. ನಂತರ ಜಗನ್ನಾಥ್ ಶೆಟ್ಟಿ ಚೌಕಾಸಿ ಮಾಡಿ 50 ಲಕ್ಷ ಕೊಡುವುದಾಗಿ ಒಪ್ಪಿಕೊಳ್ತಾರೆ. ಬಳಿಕ ಮೂರು ಕಂತಿನಲ್ಲಿ 50 ಲಕ್ಷವನ್ನು ಸಲ್ಮಾ ಭಾನು ಹಾಗೂ ಅವರ ಜೊತೆಗಿದ್ದವರಿಗೆ ಜಗನ್ನಾಥ್ ಶೆಟ್ಟಿ ನೀಡ್ತಾರೆ‌. ಇದಾದ ನಂತರವು ಹಣಕ್ಕೆ ಸಲ್ಮಾ ಭಾನು ಬೇಡಿಕೆ ಇಡುತ್ತಿದ್ದ ಕಾರಣ ಇದೀಗ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ಸಲ್ಮಾ ಭಾನು ಸೇರಿದಂತೆ ನಾಲ್ವರ ವಿರುದ್ಧ ಜಗನ್ನಾಥ್ ಶೆಟ್ಡಿ ದೂರು ನೀಡಿದ್ದಾರೆ‌.

ದೂರಿನ ಅನ್ವಯ ಇದೀಗ ಪೊಲೀಸರು ಸಲ್ಮಾ ಭಾನುನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದು, ಉಳಿದ ಮೂವರು ಇದೀಗ ತಲೆಮರೆಸಿಕೊಂಡಿದ್ದಾರೆ. ಒಟ್ಟಾರೆ ಹಣದ ಆಸೆಗೆ ಹನಿಟ್ರ್ಯಾಪ್ ಮಾಡಿ ಉದ್ಯಮಿಗೆ ಖೆಡ್ಡಾ ತೊಡಲು ಮುಂದಾಗಿದ್ದ ಮಹಿಳೆ ಇದೀಗ ಪೊಲೀಸರ ವಶದಲ್ಲಿದ್ದು, ವಿಚಾರಣೆಯ ವೇಳೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸತ್ಯಾಸತ್ಯೆ ಬೆಳಕಿಗೆ ಬರಬೇಕಾಗಿದೆ.

ಮಂಡ್ಯ ಹನಿ ಟ್ರ್ಯಾಪ್ ಪ್ರಕರಣ ಎಸ್ ಪಿ ಯತೀಶ್ ಹೇಳಿಕೆ ನಿಡಿದ್ದು, ದೂರುದಾರರ ಹೇಳಿಕೆಯ ಪ್ರಕಾರ ಮೂರು ಜನರನ್ನು ಬಂಧನ ಮಾಡಲಾಗಿದೆ, ಇನ್ನು ಮೂರು ಜನರ ಬಂಧನ ಆಗಬೇಕಿದೆ ಪ್ರಕರಣವು ಇನ್ನೂ ಕೂಡ ವಿಚಾರಣಾ ಹಂತದಲ್ಲಿದ್ದು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಬೇಕಾಗಿದೆ. ಇವರ ಬಂಧನ ಆದ ನಂತರ ಇನ್ನು ಹಲವು ಮಾಹಿತಿಗಳು ನಮಗೆ ಲಭ್ಯವಾಗಿದ್ದು ಅವುಗಳನ್ನು ಅವುಗಳ ಪ್ರಕಾರ ತನಿಖೆ ಮಾಡಬೇಕಿದೆ. ಈ ಪ್ರಕರಣದಲ್ಲಿ ಇನ್ನೋರ್ವ ಮಹಿಳೆಯಿದ್ದು ಅವರ ಬಂಧನ ಆಗಬೇಕು ಈ ಪ್ರಕರಣ ಸಂಬಂಧಿಸಿದಂತೆ ಈಗ ಹೆಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ, ದೂರುದರರು ನೀಡಿರುವ ದೂರನ್ನು ಪರಿಶೀಲನೆ ಮಾಡಿದ್ದು ಅಗತ್ಯವಿದ್ದಲ್ಲಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *