Ad Widget .

ಹಾಳಾಗಿರುವ ಹೆದ್ದಾರಿ ಸಮಸ್ಯೆ ತಿಳಿಸಲು ಹೊಸ ಆ್ಯಪ್| ನಿಗಧಿತ ಅವಧಿಯೊಳಗೆ ರಿಪೇರಿ ಮಾಡದಿದ್ರೆ ಕ್ರಮ

ಸಮಗ್ರ ನ್ಯೂಸ್: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲು ಟೋಲ್ ಶುಲ್ಕ ನೀಡಿದರೂ ಸಹ ಗುಂಡಿ ಗೊಟರುಗಳಿಂದ ಕೂಡಿರುವುದು ಹಾಗೂ ರಸ್ತೆ ಹಾಳಾಗಿರುವ ಕುರಿತು ವಾಹನ ಸವಾರರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ.

Ad Widget . Ad Widget .

ಅಲ್ಲದೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋವನ್ನು ಹರಿಬಿಟ್ಟು ಸಂಬಂಧಪಟ್ಟವರ ಗಮನಕ್ಕೆ ತರಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ. ಈಗ ಇದಕ್ಕೆ ಪರಿಹಾರ ಕಂಡುಕೊಳ್ಳಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

Ad Widget . Ad Widget .

ರಸ್ತೆ ಗುಂಡಿಗಳಿಂದಾಗಿಯೇ ಪ್ರತಿ ವರ್ಷ 2300 ಮಂದಿ ಸಾವನ್ನಪ್ಪಿರುವ ಸಂಗತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಹಾಳಾಗಿರುವ ರಸ್ತೆಗಳ ಮಾಹಿತಿ ಒದಗಿಸುವ ಸಲುವಾಗಿ ಆನ್ಲೈನ್ ವ್ಯವಸ್ಥೆ ಹಾಗೂ ಮೊಬೈಲ್ ಫೋನ್ ಅಪ್ಲಿಕೇಶನ್ ಆರಂಭಿಸಲು ಉದ್ದೇಶಿಸಲಾಗಿದೆ.

ಈ ಅಪ್ಲಿಕೇಶನ್ ಮೂಲಕ ಸಾರ್ವಜನಿಕರು ಫೋಟೋ ಸಹಿತ ಮಾಹಿತಿ ನೀಡಿದ ಸಂದರ್ಭದಲ್ಲಿ ಅದನ್ನು ಸರಿಪಡಿಸಲು ಹೆದ್ದಾರಿ ಗುತ್ತಿಗೆ ನಿರ್ವಹಿಸುವ ಕಂಪನಿಗಳಿಗೆ ಕಾಲಾವಕಾಶ ನಿಗದಿಪಡಿಸಲಾಗುತ್ತದೆ. ಒಂದು ವೇಳೆ ನಿಗದಿತ ಕಾಲಾವಧಿಯೊಳಗೆ ಸರಿಪಡಿಸದಿದ್ದರೆ ಅವರುಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *