Ad Widget .

ಗ್ರಾಹಕರಿಗೆ ಗುಡ್ ನ್ಯೂಸ್; ಅಡುಗೆ ಎಣ್ಣೆ, ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಬಾರೀ ಇಳಿಕೆ

ಸಮಗ್ರ ನ್ಯೂಸ್: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೇ ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಖಾದ್ಯ ತೈಲ, ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆಯಾಗಿದೆ.

Ad Widget . Ad Widget .

ಖಾದ್ಯ ತೈಲದ ದರ ಶೇಕಡ 15 ರಿಂದ 20ರಷ್ಟು ಇಳಿಕೆಯಾಗಿದ್ದು, ಬಿಸ್ಕೆಟ್ ಹಾಗೂ ಇನ್ನಿತರ ವಸ್ತುಗಳ ಬೆಲೆ ಶೇಕಡ 10 ರಿಂದ 15 ರಷ್ಟು ಇಳಿಕೆಯಾಗಿದೆ.

Ad Widget . Ad Widget .

ಉತ್ಪಾದನಾ ವೆಚ್ಚ ತಗ್ಗಿರುವುದು, ಕಚ್ಚಾ ವಸ್ತುಗಳ ಬೆಲೆ ಇಳಿಕೆಯಾಗಿರುವುದರಿಂದ ಎಲೆಕ್ಟ್ರಾನಿಕ್ ವಸ್ತುಗಳ ದರವೂ ಕಡಿಮೆಯಾಗಿದೆ.

ಪ್ರಮುಖ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಸಂಸ್ಥೆಗಳಾದ ಸ್ಯಾಮ್ಸಂಗ್, ಎಲ್.ಜಿ., ಸೋನಿ ಟಿವಿ ದರ ಶೇಕಡ 5 ರಿಂದ 8 ರಷ್ಟು ಇಳಿಕೆಯಾಗಿದೆ. ಲ್ಯಾಪ್ಟಾಪ್ ದರ 1500 ರೂ. ನಿಂದ 2000 ರೂಪಾಯಿವರೆಗೆ ಕಡಿಮೆಯಾಗಿದ್ದು, ಸ್ಮಾರ್ಟ್ ಫೋನ್ ಗಳ ದರ ಶೇಕಡ 4 ರಿಂದ 5 ರಷ್ಟು ಕಡಿಮೆಯಾಗಿದೆ.

ಕೊರೋನಾ ಹತೋಟಿಗೆ ಬಂದಿರುವುದು, ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಕಡಿಮೆಯಾಗಿರುವುದು, ಹಬ್ಬದ ಹೊತ್ತಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಂಪನಿಗಳು ಮುಂದಾಗಿರುವುದು, ಕೆಲವು ತೆರಿಗೆ ವಿನಾಯಿತಿಗಳ ಲಾಭ ಗ್ರಾಹಕರಿಗೆ ವರ್ಗಾವಣೆ ಮಾಡಲಾಗುತ್ತಿದ್ದು, ಇದರ ಪರಿಣಾಮ ಆಹಾರ ಪದಾರ್ಥಗಳು, ದಿನ ಬಳಕೆ ವಸ್ತುಗಳ ಜೊತೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳ ದರ ಕೂಡ ಕಡಿಮೆಯಾಗಿದೆ.

Leave a Comment

Your email address will not be published. Required fields are marked *