Ad Widget .

ಸುಳ್ಯ: ಅರಮನೆಗಯದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ಘಟಕ ಉದ್ಘಾಟನೆ| ‘ಸಮಗ್ರ ಸಮಾಚಾರ’ಕ್ಕೆ ಸನ್ಮಾನ

ಸಮಗ್ರ ನ್ಯೂಸ್: ಅಂಬೇಡ್ಕರ್ ರಕ್ಷಣಾ ವೇದಿಕೆಯ ನೂತನ ಘಟಕದ ಉದ್ಘಾಟನೆ ಕಾರ್ಯಕ್ರಮವು ಆ.22 ರಂದು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆಯಲ್ಲಿ ನಡೆಯಿತು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೇನಾಧಿಕಾರಿ ಕಮಲಾಕ್ಷ ಪಿಂಡಿಮನೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಸೇನಾಧಿಕಾರಿ ನವೀನ್ ಪಿಂಡಿಮನೆ, ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ಅಂಬೇಡ್ಕರ್ ರಕ್ಷಣಾ ವೇದಿಕೆಯ ಆಲೆಟ್ಟಿ ಗ್ರಾಮ ಘಟಕದ ಅಧ್ಯಕ್ಷರಾದ ಆನಂದ ರಂಗತ್ತಮಲೆ, ಸಮಗ್ರ ಸಮಾಚಾರ ಪ್ರಧಾನ ಸಂಪಾದಕ ಜಯದೀಪ್ ಕುದ್ಕುಳಿ ಹಾಗೂ ಸ್ಥಳೀಯ ಸಂಘಟಕರು ಉಪಸ್ಥಿತರಿದ್ದರು.

Ad Widget . Ad Widget . Ad Widget .

ನೂತನ ಪದಾಧಿಕಾರಿಗಳ ಆಯ್ಕೆ:
ಅಂಬೇಡ್ಕರ್ ರಕ್ಷಣಾ ವೇದಿಕೆಯ ನೂತನ ಘಟಕದ ಅರಂತೋಡು ಗ್ರಾಮದ ಅಡ್ತಲೆ 3 ನೇ ವಾರ್ಡುನ
ಪದಾಧಿಕಾರಿಗಳ ಆಯ್ಕೆಗೊಂಡಿದ್ದು ಅಧ್ಯಕ್ಷರಾಗಿ ತೇಜಕುಮಾರ ಅರಮನೆಗಯ,ಕಾರ್ಯದರ್ಶಿಯಾಗಿ ನವೀನ ಕಲ್ಲುಗುಡ್ಡೆ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ವಿಮಲ ಅರಮನೆಗಯ ಕಾರ್ಯದರ್ಶಿಯಾಗಿ ಪ್ರಿಯಾ ಕಕ್ಕಡ ಇವರನ್ನು ಆಯ್ಕೆ ಮಾಡಲಾಯಿತು.

ಸಮಗ್ರ ಸಮಾಚಾರ ಪ್ರಧಾನ ಸಂಪಾದಕರಿಗೆ ಸನ್ಮಾನ:
ಅರಮನೆಗಯದ ಕಾಲು ಸೇತುವೆಯ ಕುರಿತು ವರದಿ ಮಾಡಿದ್ದರಿಂದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಗಮನಕ್ಕೆ ಬಂದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಕುರಿತು ಮಾಹಿತಿ ತಿಳಿದಿದ್ದರು. ಇದಕ್ಕೆ ಸಂಬಂಧ ಪಟ್ಟ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಲು ಸೇತುವೆಯ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸಲಾಯಿತು . ಸಮಸ್ಯೆಯ ಕುರಿತಂತೆ ಸಮಗ್ರ ಸಮಾಚಾರವು ಬಿತ್ತರಿಸಿದ, ವಿಸ್ಕೃತ ನಿಷ್ಪಕ್ಷಪಾತ ವರದಿಗಾರಿಕೆಯನ್ನು ಗುರುತಿಸಿ ಪ್ರಧಾನ ಸಂಪಾದಕ ಜಯದೀಪ್ ಕುದ್ಕುಳಿಯವರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭ ಅರಮನೆಗಯದ ಸೇತುವೆ ಸಮಸ್ಯೆಯನ್ನು ಬಗೆಹರಿಸುವ ಕುರಿತು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರ ಮುಖಾಂತರ ದ.ಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಯಶೋಧ ಅರಮನೆಗಯ ಹಾಗೂ ಧನಂಜಯ ಕುಂಪುಳಿ ಅವರು ಧನ್ಯವಾದವನ್ನು ನೆರವೇರಿಸಿದರು.

Leave a Comment

Your email address will not be published. Required fields are marked *