Ad Widget .

ಜೈಪುರ: ಕ್ಯಾಸಿನೋ ಎಣ್ಣೆಪಾರ್ಟಿಯಲ್ಲಿ ಸಿಕ್ಕಿಬಿದ್ದ ಕರ್ನಾಟಕದ ಪ್ರಮುಖ ಕುಳಗಳು| ಅಧಿಕಾರಿಗಳ ಮೋಜುಮಸ್ತಿಗೆ ಪೊಲೀಸರೇ ದಂಗು!

ಸಮಗ್ರ ನ್ಯೂಸ್: ಕ್ಯಾಸಿನೊ ಮದ್ಯದ ಡ್ಯಾನ್ಸ್ ಪಾರ್ಟಿಯಲ್ಲಿ ಕರ್ನಾಟಕದ ಕೆಲ ದೊಡ್ಡ ದೊಡ್ಡ ಹುದ್ದೆಯಲ್ಲಿನ ಅಧಿಕಾರಿಗಳು ಸೇರಿದಂತೆ 84 ಮಂದಿ ಸಿಕ್ಕಿಬಿದ್ದಿರುವ ಘಟನೆ ಜೈಸಿಂಗ್‌ಪುರ ಖೋರ್ ಪೊಲೀಸ್ ಠಾಣೆ ವ್ಯಾಪ್ತಿಯ ಫಾರ್ಮ್ ಹೌಸ್‌ನಲ್ಲಿ ನಡೆದಿದೆ.

Ad Widget . Ad Widget .

ಜೈಪುರ ಪೊಲೀಸ್ ಕಮಿಷನರೇಟ್ ವಿಶೇಷ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ. ಸ್ಥಳದಲ್ಲಿದ್ದ 13 ಮಂದಿ ಹುಡುಗಿಯರನ್ನೂ ಬಂಧಿಸಲಾಗಿದೆ.

Ad Widget . Ad Widget .

ಕರ್ನಾಟಕದ ಪೊಲೀಸ್ ಇನ್​​ಸ್ಪೆಕ್ಟರ್ ಅಂಜಯ್ಯ, ಬೆಂಗಳೂರಿನ ತಹಶೀಲ್ದಾರ್ ಶ್ರೀನಾಥ್ ಮತ್ತು ಕಾಲೇಜು ಪ್ರಾಧ್ಯಾಪಕ ಕೆ.ಎಲ್. ರಮೇಶ್ ಸೇರಿದಂತೆ ಕೆಲವರು ಈ ಸ್ಥಳದಲ್ಲಿ ಪಾರ್ಟಿ ಮಾಡುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ದಾಳಿಯ ನಂತರ 9 ಹುಕ್ಕಾಗಳು, 21 ಜೋಡಿ ಕಾರ್ಡ್‌ಗಳು, 7 ಟೇಬಲ್‌ಗಳು, 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಮತ್ತು 23 ಲಕ್ಷದ 71 ಸಾವಿರದ 408 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ. ಈವೆಂಟ್ ಮ್ಯಾನೇಜರ್ ನರೇಶ್ ಮಲ್ಹೋತ್ರಾ ಅಲಿಯಾಸ್ ರಾಹುಲ್, ಅವರ ಮಗ ಮನ್ವೇಶ್, ಫಾರ್ಮ್ ಹೌಸ್ ಮ್ಯಾನೇಜರ್ ಮೋಹಿತ್ ಸೋನಿ, ಮೀರತ್ ನಿವಾಸಿ ಮನೀಶ್ ಶರ್ಮಾ ಅವರನ್ನು ಮಾನವ ಕಳ್ಳಸಾಗಣೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.

ಕರ್ನಾಟಕ ಮಾತ್ರವಲ್ಲದೇ ತೆಲಂಗಾಣ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದ ಅಧಿಕಾರಿಗಳು ಹಾಗೂ ನಿವಾಸಿಗಳು ಇಲ್ಲಿ ಪಾರ್ಟಿಗೆಂದು ಬಂದಿದ್ದು ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಅಲ್ಲಿ ಕುಡಿದು ಕುಪ್ಪಳಿಸಿ ಅಶ್ಲೀಲವಾಗಿದ್ದ ಅಧಿಕಾರಿಗಳು ಹಾಗೂ ಪಾರ್ಟಿಯಲ್ಲಿ ಮೋಜು ಮಾಡುತ್ತಿದ್ದವರನ್ನು ನೋಡಿ ಪೊಲೀಸರೇ ಬೆರಗಾಗಿದ್ದಾರೆ. ಮದ್ಯದ ಜತೆಗೆ 5 ಟೇಬಲ್‌ಗಳಲ್ಲಿ ಡ್ಯಾನ್ಸ್ ಪಾರ್ಟಿಯೊಂದಿಗೆ ಆನ್‌ಲೈನ್ ಕ್ಯಾಸಿನೊ ಸಹ ನಡೆಯುತ್ತಿತ್ತು. ಅಲ್ಲದೇ ಅಲ್ಲಿದ್ದವರು ಹುಕ್ಕಾ ಸಹ ಹೊಡೆಯುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯ ಈವೆಂಟ್ ಕಂಪೆನಿಯೊಂದು ಫಾರ್ಮ್ ಹೌಸ್​ನ್ನು 2 ದಿನ ಬಾಡಿಗೆಗೆ ಪಡೆದು, ಕ್ಯಾಸಿನೊ ಜೊತೆಗೆ ಜೂಜಾಟ ಸಹ ನಡೆಸುತ್ತಿತ್ತು. ಜೂಜು ಆಡುತ್ತಿದ್ದವರಲ್ಲಿ ಅನೇಕರು ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದವರೇ ಆಗಿರುವುದಾಗಿ ಹೆಚ್ಚುವರಿ ಪೊಲೀಸ್ ಕಮಿಷನರ್ ಕ್ರೈಂ ಅಜಯ್‌ಪಾಲ್ ಲಂಬಾ ಹೇಳಿದ್ದಾರೆ. ಹೊರಗಿನಿಂದ ಹುಡುಗಿಯರನ್ನು ಇಲ್ಲಿಗೆ ಬಂದವರಿಗೆ ಒದಗಿಸಲಾಗುತ್ತಿತ್ತು. ಆರೋಪಿ ಮನೀಶ್ ನೇಪಾಳದಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಲಂಬಾ ತಿಳಿಸಿದ್ದಾರೆ.

Leave a Comment

Your email address will not be published. Required fields are marked *