Ad Widget .

ಆರ್ಯವರ್ಧನ್ ಪಾತ್ರಕ್ಕೆ ಅನೂಪ್ ಭಂಡಾರಿ? ‘ರಂಗಿತರಂಗ’ ನಿರ್ದೇಶಕ ‘ಜೊತೆಜೊತೆಯಲಿ’ ಧಾರಾವಾಹಿಗೆ?

ಸಮಗ್ರ ನ್ಯೂಸ್: ಜೊತೆ ಜೊತೆಯಲಿ’ ಧಾರಾವಾಹಿ ತಂಡ ಮತ್ತು ನಟ ಅನಿರುದ್ಧ್ ನಡುವೆ ವೈಮನಸ್ಸು ಉಂಟಾಗಿ, ತಂಡದಲ್ಲಿ ಆದ ಕಿರಿಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಅನಿರುದ್ಧ್ ವಿರುದ್ಧ ತಂಡ ರೊಚ್ಚಿಗೆದ್ದಿದೆ. ಅನಿರುದ್ಧ್ ಮತ್ತು ಸೀರಿಯಲ್ ತಂಡ ಮಾಧ್ಯಮದ ಮುಂದೆ ತಮ್ಮದೇ ಆದ ಹೇಳಿಕೆಯನ್ನು ಕೊಟ್ಟಿವೆ.

Ad Widget . Ad Widget .

ಈ ವಿಚಾರ ಎಲ್ಲೆಡೆ ಸದ್ದು ಮಾಡುತ್ತಲೇ, ನಟ ಅನಿರುದ್ಧ್ ನಡೆದಿರುವುದರ ಬಗ್ಗೆ ಮಾಧ್ಯಗಳ ಸ್ಪಷ್ಟನೆ ಕೊಟ್ಟಿದ್ದಾರೆ. ತಮ್ಮ ಮೇಲೆ ಸೀರಿಯಲ್ ನಿರ್ದೇಶಕ, ನಿರ್ಮಾಪಕ ಜಗದೀಶ್ ಅವರು ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ಕೊಟ್ಟರು.

Ad Widget . Ad Widget .

ಜೊತೆ ಜೊತೆಯಲಿ ಸೀರಿಯಲ್ ತಂಡದಿಂದ ಅನಿರುದ್ಧ್ ಅವರನ್ನು ಕೈ ಬಿಡುವುದಾಗಿ, ಸೀರಿಯಲ್ ತಂಡ ಸುದ್ದಿಗೋಷ್ಠಿ ಮೂಲಕ ಸ್ಪಷ್ಟ ಪಡಿಸಿತ್ತು. ಇದರ ಬೆನ್ನಲ್ಲೇ, ಆರ್ಯವರ್ಧನ್ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವ ಕುತೂಹಲ ಹುಟ್ಟಿ ಕೊಂಡಿತು.

ಮುಂದಿನ ಆರ್ಯವರ್ಧನ್ ಯಾರು? ಕಿರುತೆರೆಗೆ ಬರ್ತಾರಾ ನಿರ್ದೇಶಕ ಅನೂಪ್ ಭಂಡಾರಿ!?
ಹೌದು, ನಿರ್ದೇಶಕ ಅನೂಪ್ ಭಂಡಾರಿಯ ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ನಟಿಸುತ್ತಾರೆ ಎನ್ನಲಾಗಿದೆ. ಹೊಸ ಆರ್ಯವರ್ಧನ್ ಆಗಿ ಅನೂಪ್ ಭಂಡಾರಿ ನಟಿಸಲಿದ್ದಾರೆ ಎನ್ನಲಾಗಿದೆ. ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಹೇಳಿ ಮಾಡಿಸಿದ ಹಾಗೆ ಇದ್ದರು. ಆದರೆ ನಡೆದ ಅವಾಂತರದಿಂದ ಅವರು ಅನಿವಾರ್ಯವಾಗಿ ಈ ಧಾರಾವಾಹಿಯಿಂದ ಹೊರ ನಡೆಯಬೆಕಾಗಿದೆ. ಈಗ ಈ ಪಾತ್ರವನ್ನು ಅನೂಪ್ ಭಂಡಾರಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಿರ್ದೇಶಕ ಅನೂಪ್ ಭಂಡಾರಿ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನೂಪ್ ಇತ್ತೀಚೆಗಷ್ಟೆ ಸುದೀಪ್‌ಗೆ ‘ವಿಕ್ರಾಂತ್ ರೋಣ’ ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಜೊತೆಗೆ ಮುಂದಿನ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಹಾಗಾಗಿ ಅವರು ಕಿರುತೆರೆಗೆ ಬರುವುದು ಅನುಮಾನವೇ. ಆದರೂ ಅವರ ಹೆಸರು ಮಾತ್ರ ಕೇಳಿ ಬಂದಿದೆ. ಆದರೆ ಇದನ್ನು ಅಧಿಕೃತವಾಗಿ ಯಾರೂ ಹೇಳಿಕೊಂಡಿಲ್ಲ. ಆದರೆ ಧಾರಾವಾಹಿಗಾಗಿ ಅನೂಪ್ ಅವರನ್ನು ತಂಡದವರು ಕೇಳಿದ್ದರು ಎಂದು ಅನೂಪ್ ಹೇಳಿದ್ದಾರೆ.

Leave a Comment

Your email address will not be published. Required fields are marked *