Ad Widget .

ವೈಷ್ಣವೋದೇವಿ ಯಾತ್ರೆ ಮತ್ತೆ ಆರಂಭ

ಶ್ರೀನಗರ – ವೈಷ್ಣವೋದೇವಿ ಯಾತ್ರೆ ಮತ್ತೆ ಇಂದಿನಿಂದ ಆರಂಭವಾಗಲಿದೆ. ಹವಾಮಾನ್ಯ ವೈಪರಿತ್ಯ ಹಿನ್ನೆಲೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

Ad Widget . Ad Widget .

ಇಂದಿನಿಂದ ವೈಷ್ಣವೋದೇವಿ ಯಾತ್ರೆ ಪುನಾರರಾಂಭಗೊಳ್ಳಲು ಸಿದ್ದವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Ad Widget . Ad Widget .

ಸ್ಥಳದಲ್ಲಿ ಯಾತ್ರಾತ್ರಿಗಳ ರಕ್ಷಣೆಗೆ ಪೊಲೀಸರು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯು ನಿಗಾವಹಿಸುತ್ತಿದೆ.

ಕಳೆದ ಜುಲೈ ತಿಂಗಳಿನಲ್ಲಿ ಅಮರನಾಥದ ಪವಿತ್ರ ಗುಹೆ ಪ್ರದೇಶದಲ್ಲಿ ಮೇಘಸ್ಫೋಟ ಉಂಟಾಗಿ ವೈಷ್ಣವೋದೇವಿ ಗುಹೆಯ ಪಕ್ಕದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಅಪಾರ ಹಾನಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

ಹಿಮಾಚಲ ಪ್ರದೇಶದಲ್ಲಿ ಮೇಘಸ್ಪೋಟದಿಂದ 22 ಮಂದಿ ಸಾವನ್ನಪ್ಪಿದ್ದಾರೆ. ಇದೆಲ್ಲದರ ನಡುವೆ ವೈಷ್ಣವೋದೇವಿ ಯಾತ್ರೆ ಪುನಾರರಾಂಭಗೊಂಡಿದ್ದು, ಸದ್ಯದ ಪಿರ್‍ಪಂಜಲ್ ಪರ್ವತ ಶ್ರೇಣಿಯ ಮೇಲ್ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ದರಹಾಲಿ ನದಿ ಕೂಡ ಉಕ್ಕಿ ಹರಿಯುತ್ತಿದೆ.

Leave a Comment

Your email address will not be published. Required fields are marked *