Ad Widget .

ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದರಾ ಸಿದ್ದರಾಮಯ್ಯ| ಮತ್ತೊಂದು ವಿವಾದ ಶುರು

ಸಮಗ್ರ ನ್ಯೂಸ್: ಮಾಂಸಹಾರ ಸೇವಿಸಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂಬ ಮತ್ತೊಂದು ವಿವಾದ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಮಡಿಕೇರಿಗೆ ನೆರೆ ಸಂಕಷ್ಟಗಳನ್ನು ವೀಕ್ಷಿಸಲು ಸಿದ್ದರಾಮಯ್ಯ ಭೇಟಿ ನೀಡಿದ್ದರು. ಆ ವೇಳೆ ವಿಧಾನಪರಿಷತ್‍ನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಮನೆಯಲ್ಲಿ ಸಿದ್ದರಾಮಯ್ಯ ಮತ್ತು ಇತರ ಮುಖಂಡರು ಊಟ ಮಾಡಿದ್ದರು. ಸಂಜೆ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು.

Ad Widget . Ad Widget .

ಮಾಂಸಾಹಾರ ಊಟ ಮಾಡಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ತೀವ್ರ ಚರ್ಚೆಗೂ ಗ್ರಾಸವಾಗಿದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಧರ್ಮಸ್ಥಳಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ ವೇಳೆಯೂ ಮೀನು ತಿಂದು ಹೋಗಿದ್ದಾರೆ ಎಂಬ ಅಪವಾದಗಳು ಕೇಳಿಬಂದಿದ್ದವು. ಈಗ ಮತ್ತದೇ ವಿವಾದ ಚರ್ಚೆಯಾಗುತ್ತಿದೆ.

Ad Widget . Ad Widget .

ವಿಧಾನಪರಿಷತ್‍ನ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮಡಿಕೇರಿ ಅತಿಥಿ ಸತ್ಕಾರ್ಯಕ್ಕೆ ಹೆಸರುವಾಸಿ. ಸಿದ್ದರಾಮಯ್ಯ ಅವರು ಬಂದಾಗ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಕ್ಕಿ ರೊಟ್ಟಿ, ರಾಗಿ ಮದ್ದೆ, ಬಿದಿರಿನ ಕಣಲೆ,ನಾಟಿಕೋಳಿ ಮಾಂಸಾಹಾರವನ್ನು ಮಾಡಲಾಗಿತ್ತು. ಸಿದ್ದರಾಮಯ್ಯನವರಿಗೆ ನಾನೇ ಊಟ ಬಡಿಸಿದೆ. ಅವರು ಮಾಂಸಾಹಾರ ಬೇಡ ಎಂದು ಹೇಳಿ ಬಿದಿರಿನ ಕಣಲೆ ಸಾರಿನಲ್ಲಿ ಊಟ ಮಾಡಿದರು ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿಯವರು ದುರುದ್ದೇಶಪೂರ್ವಕವಾಗಿ ಸಿದ್ದರಾಮಯ್ಯನವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯನವರು, ಬಿಜೆಪಿಯವರ ಆರೋಪಕ್ಕೆ ಕಿಡಿಕಾರಿದ್ದಾರೆ. ಸುಳ್ಳು ಹಬ್ಬಿಸುವುದು, ಅಪಪ್ರಚಾರ ಮಾಡುವುದು ಬಿಜೆಪಿಯವರ ಜಾಯಮಾನ. ಹಿಂದಿನ ದಿನ ಮಾಂಸಾಹಾರ ಊಟ ಮಾಡಿ ಮಾರನೇ ದಿನ ದೇವಸ್ಥಾನಕ್ಕೆ ಹೋದರೆ ತಪ್ಪಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *