Ad Widget .

ಇನ್ಫೋಸಿಸ್​ನ ಹುಬ್ಬಳ್ಳಿ ಕಚೇರಿಯಲ್ಲಿ ವಿವಿಧ ಹುದ್ದೆಯ ನೇಮಕಾತಿಗೆ ಅರ್ಜಿ ಆಹ್ವಾನ

ಇನ್ಫೋಸಿಸ್​ನ ಹುಬ್ಬಳ್ಳಿ ಕಚೇರಿಯಲ್ಲಿ ವಿವಿಧ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಹುಬ್ಬಳ್ಳಿಯ ಇನ್ಫೋಸಿಸ್​ ಕಚೇರಿಯಲ್ಲಿ ಏರೋಸ್ಪೇಸ್​ ಇಂಜಿನಿಯರ್ (Aerospace Engineer)​ ಮತ್ತು ಜಾವ ಡೆವಲಪರ್ (Java Developer)​ ಹುದ್ದೆಗಳ ನೇಮಕಾತಿಗೆ ಸಂಸ್ಥೆ ಮುಂದಾಗಿದೆ. ಈ ಸಂಬಂಧ ಇನ್ಫೋಸಿಸ್​ ಕೆರಿಯರ್​ ಟ್ವೀಟ್​ ಮೂಲಕ ಅಭ್ಯರ್ಥಿಗಳಿಗೆ ಸಂಸ್ಥೆ ಮಾಹಿತಿ ನೀಡಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

Ad Widget . Ad Widget .

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಬಿಇ ಪದವಿಯನ್ನು ಪಡೆದಿರಬೇಕು. ಏರೋಸ್ಪೇಸ್​ ಇಂಜಿನಿಯರಿಂಗ್​ ಮತ್ತು ಜಾವ ಡೆವಲಪರ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐದು ವರ್ಷಕ್ಕಿಂಗ ಹೆಚ್ಚಿನ ಕಾರ್ಯ ನಿರ್ವಹಣೆ ಅನುಭವ ಹೊಂದಿರಬೇಕು.

Ad Widget . Ad Widget .

ಏರೋಸ್ಪೇಸ್​ ಇಂಜಿನಿಯರ್​ ಅಭ್ಯರ್ಥಿಗಳು ಎಂಬೆಡೆಡ್ ಸಾಫ್ಟ್‌ವೇರ್- ನಿಯಂತ್ರಣ ವ್ಯವಸ್ಥೆಗಳು ಮತ್ತು ಸ್ವಾಧೀನ ವ್ಯವಸ್ಥೆಗಳು, ಏರೋಸ್ಪೇಸ್ ಡೊಮೇನ್, ಏರೋಸ್ಪೇಸ್ ಡೊಮೇನ್- ವಿಮಾನ ನಿರ್ವಹಣೆ ಕೌಶಲ್ಯವನ್ನು ಹೊಂದಿರಬೇಕು
ಜಾವ ಡೆವಲಪರ್​: ಜಾವ, ಜಾವ ಆಲ್​, ಜಾವ 8, ಮೈಕ್ರೋಸರ್ವಿಸ್​, ಸ್ಪ್ರಿಂಗ್​ಬೋಟ್​ ಕೌಶಲ್ಯವನ್ನು ಹೊಂದಿರಬೇಕು.

ಆನ್‌ಲೈನ್ ಮೋಡ್ ಮೂಲಕ ನಿಗದಿತ ಅರ್ಜಿಯನ್ನು ಡೌನ್​ ಲೋಡ್​ ಮಾಡಿ. ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ನೀಡಿ.

ಅರ್ಜಿ ಸಲ್ಲಿಸುವವರು www.infosys.com  ಈ ಲಿಂಕ್ ಕ್ಲಿಕ್ ಮಾಡಬೇಕು. ಬಳಿಕ ಪಿಡಿಎಫ್/ಎಂಎಸ್ ವರ್ಡ್ ಫಾರ್ಮ್ಯಾಟ್ ಮೂಲಕ ರೆಸ್ಯೂಮೆ ಅಪ್ಲೋಡ್ ಮಾಡಬೇಕು. ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ.

Leave a Comment

Your email address will not be published. Required fields are marked *