Ad Widget .

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಭಕ್ತಿ ಸಂಗೀತ ರಸಮಂಜರಿ

ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಚಂದನ ಸಾಹಿತ್ಯ ವೇದಿಕೆ ವತಿಯಿಂದ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಭವನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಕ್ತಿ ಸಂಗೀತ ರಸಮಂಜರಿ ಕಾರ್ಯಕ್ರಮವು ಜರುಗಿತು . ಕಾರ್ಯಕ್ರಮವನ್ನು ಉತ್ತರ ಕರ್ನಾಟಕ ಗೆಳೆಯರ ಬಳಗದ ಅಧ್ಯಕ್ಷರಾದ ಮಂಜುನಾಥ್ ಮೇಸ್ತ್ರಿಯವರು ಉದ್ಘಾಟನೆ ಮಾಡಿದರು . ಘನ ಅಧ್ಯಕ್ಷತೆಯನ್ನು ಸುಳ್ಯ ಘಟಕದ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬಿ ಕೆ ಉಮಾದೇವಿ ಅವರು ವಹಿಸಿದ್ದರು . ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಗಜೇಂದ್ರಗಡ ಘಟಕದ ಸಂಚಾಲಕರಾದ ಬಿ ಕೆ ಸರೋಜಾ ರವರು ಮತ್ತು ಕೆವಿಜಿ ಇಂಜನೀಯರಿಂಗ್ ಕಾಲೇಜಿನ ಉಪನ್ಯಾಸಕರು , ಸಾಹಿತಿಗಳಾದ ವಿಜಯಕುಮಾರ್ ಕಾಣಿಚಾರ್ ರವರು ಮುಖ್ಯ ಅತಿಥಿಗಳಾಗಿದ್ದರು .ಇನ್ನೋರ್ವ ಮುಖ್ಯ ಅತಿಥಿಗಳಾದ ಸುಳ್ಯದ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರರಾದ ಶ್ರೀ ಹರೀಶ್ ಬಂಟವಾಳ ರವರು ಭಾಗವಹಿಸಿದ ಎಲ್ಲಾ ಗಾಯಕರಿಗೂ ಅಭಿನಂದನಾ ಪತ್ರಗಳನ್ನು ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು . ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಕೊಳಲು ವಾದಕ ವೀಕ್ಷಿತ್ ಮಡಪ್ಪಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು . ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರಾದ ಅಶ್ವಿಜ್ ಆತ್ರೇಯ ಸುಳ್ಯ , ವೈಷ್ಣವಿ ಎಮ್ ಆರ್ ಪುತ್ತೂರು , ಪೂಜಾಶ್ರೀ ಬಳ್ಳಡ್ಕ ಸುಳ್ಯ , ಗಣೇಶ್ ಮಾವಿನಕಟ್ಟೆ , ಪೂರ್ಣಿಮಾ ಪೆರ್ಲಂಪಾಡಿ , ರವಿ ಪಾಂಬಾರ್ , ಮನ್ವಿತಾ ಸುಳ್ಯ , ಗಣೇಶ್ ಚರಣ್ , ಗಣೇಶ್ ಬಾಳಿಗಾ ಬಂಟವಾಳ , ಭಾಗ್ಯಶ್ರೀ ದೇವಿಪ್ರಸಾದ್ , ಭಾಸ್ಕರ್ ಅಡೂರು , ಹರೀಶ್ ಪಂಜಿಕಲ್ಲು , ಚಂದನ್ ಸುಳ್ಯ , ಚಿನ್ಮಯ್ ಸುಳ್ಯ , ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಮತ್ತು ಚೆನ್ನಕೇಶವ ಮಾಸ್ಟರ್ ಸ್ಟುಡಿಯೋ ಇನ್ನಿತರರು ಭಾಗವಹಿಸಿದ್ದರು. ಪ್ರಾರ್ಥನಾ ಗೀತೆಯನ್ನು ಭಾಗ್ಯಶ್ರೀ ಹಾಡಿದರು . ಸ್ವಾಗತ ಭಾಷಣವನ್ನು ಪೂರ್ಣಿಮಾ ಪೆರ್ಲಂಪಾಡಿ ಮಾಡಿದರು .ಕಾರ್ಯಕ್ರಮ ನಿರೂಪಣೆ ಮತ್ತು ವಂದನಾರ್ಪಣೆಯನ್ನು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ರವರು ಮಾಡಿದರು . ಭಾಗವಹಿಸಿದ ಎಲ್ಲರಿಗೂ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದಲ್ಲಿ ಶ್ರೀಕೃಷ್ಣ ತೂಗುವ ತೊಟ್ಟಿಲನ್ನು ತೂಗಲು ಅವಕಾಶ ನೀಡಲಾಗಿತ್ತು ಮತ್ತು ಎಲ್ಲರಿಗೂ ರಕ್ಷೆಯನ್ನು ಕಟ್ಟಿ ಶುಭ ಹಾರೈಸಿದರು .

Ad Widget . Ad Widget .

Leave a Comment

Your email address will not be published. Required fields are marked *