Ad Widget .

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆಟಿ ಸಾಹಿತ್ಯ ಸಂಭ್ರಮ

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆಟಿ ಹಬ್ಬದ ಪ್ರಯುಕ್ತ ಆಟಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಜರುಗಿತು .

Ad Widget . Ad Widget .

Ad Widget . Ad Widget .

ಸರಕಾರಿ ಸೇವೆಯಿಂದ ನಿವೃತ್ತಿಗೊಂಡ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿಗಳಾಗಿರುವ ಶ್ರೀ ಮೋಹನ್ ನನಗಾರು ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಕೂಡ ನಡೆಯಿತು . ಇದೇ ವೇದಿಕೆಯಲ್ಲಿ ಆಟಿ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು . ಕಾರ್ಯಕ್ರಮವನ್ನು ಭಾರತೀಯ ಜೀವವಿಮಾ ಪ್ರತಿನಿಧಿಗಳ ಸಂಘಟನೆಯ ಅಧ್ಯಕ್ಷರಾದ ಶ್ರೀ ಶಂಕರಲಿಂಗಂ ಕೆ ತೊಡಿಕಾನ ಅವರು ಉದ್ಘಾಟನೆ ಮಾಡಿದರು .

ಘನ ಅಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ರವರು ವಹಿಸಿದ್ದರು .ಸುಳ್ಯ ಘಟಕದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬಿ ಕೆ ಉಮಾದೇವಿ ಅವರು ಸಾಧಕರಾದ ಸಾಹಿತಿ ನಾರಾಯಣ್ ನಾಯ್ಕ ಕುದುಕೋಳಿ , ಸಾರಿಗೆ ಸಹ ಸಂಚಾಲಕರಾದ ಗೋಪಾಲ್ ಈಶ್ವರಡ್ಕ , ಬಹುಮುಖ ಪ್ರತಿಭೆ ಧನ್ವಿ ರೈ ಪಾಣಾಜೆ ಹಾಗೂ ಮಹಿಳಾ ಕವಯಿತ್ರಿಯಾದ ವಿಂಧ್ಯಾ ಎಸ್ ರೈ ಅವರಿಗೆ ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು . ಹಿರಿಯ ಜೆಸಿಗಳ ಸಂಘದ ಅಧ್ಯಕ್ಷರಾದ ಜೇಸಿ ಪಿ ಎಸ್ ಗಂಗಾಧರ್ ರವರು ಮುಖ್ಯ ಅತಿಥಿಗಳಾಗಿದ್ದರು .

ಸಭಾ ಕಾರ್ಯಕ್ರಮದ ಬಳಿಕ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಕಾಸರಗೋಡಿನ ಖ್ಯಾತ ಯುವ ಕವಯಿತ್ರಿ ಲತಾ ಆಚಾರ್ಯ ಬನಾರಿ ಅವರು ವಹಿಸಿದ್ದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಮತ್ತು ಸಾಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರಗಳನ್ನು ಮತ್ತು ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು . ಯುವ ಗಾಯಕ ಗಣೇಶ್ ಗಣಿ ಮಾವಿನಕಟ್ಟೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು . ಪ್ರಾರ್ಥನಾ ಗೀತೆಯನ್ನು ಗಣೇಶ್ ಆಚಾರ್ಯ ಬಿ ಎಸ್ ಅವರು ಹಾಡಿದರು . ಸ್ವಾಗತ ಭಾಷಣವನ್ನು ಸಂಮ್ಯಕ್ತ್ ಜೈನ್ ಕಡಬ ಅವರು ಮಾಡಿದರು .ಕಾರ್ಯಕ್ರಮ ನಿರೂಪಣೆಯನ್ನು ಖ್ಯಾತ ಕವಯಿತ್ರಿ ಸಾನು ಉಬರಡ್ಕ ಮತ್ತು ಸುಮಂಗಲಾ ಲಕ್ಷ್ಮಣ್ ಕೋಳಿವಾಡ ಅವರು ಮಾಡಿದರು ವಂದನಾರ್ಪಣೆಯನ್ನು ಪೂರ್ಣಿಮಾ ಪೆರ್ಲಂಪಾಡಿ ರವರು ಮಾಡಿದರು .

Leave a Comment

Your email address will not be published. Required fields are marked *