ನನಗೆ ಇರುವಷ್ಟು ಹಕ್ಕುಗಳು ನಿಮಗೂ ಇವೆ – ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ

ಸಮಗ್ರ ನ್ಯೂಸ್: ಬಾಂಗ್ಲಾ ದೇಶದಲ್ಲಿರುವ ಹಿಂದೂ ಸಮುದಾಯಕ್ಕೆ ನನಗೆ ಇರುವ ಹಕ್ಕುಗಳೇ ಇವೆ ಎಂದು ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

Ad Widget ... ..

ದುರ್ಗಾ ಪೂಜೆ ಹಬ್ಬದ ಆಚರಣೆಯಲ್ಲಿ ಪಶ್ಚಿಮ ಬಂಗಾಳಕ್ಕಿಂತಲೂ ಢಾಕಾದಲ್ಲಿ ಹೆಚ್ಚಿನ ಮಂಟಪಗಳಿರುತ್ತದೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪ್ರತಿಪಾದಿಸಿದ್ದಾರೆ.

Ad Widget

ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಹಿಂದೂ ಸಮುದಾಯದೊಂದಿಗೆ ಸಂವಹ ನಡೆಸಿರುವ ಹಸೀನಾ, ಸಮುದಾಯದ ಮಂದಿ ಅಲ್ಪಸಂಖ್ಯಾತರೆಂದು ಭಾವಿಸಿಕೊಳ್ಳಬಾರದು ಬಾಂಗ್ಲಾದೇಶದಲ್ಲಿ ಧರ್ಮಗಳನ್ನು ಲೆಕ್ಕಿಸದೇ ಎಲ್ಲರೂ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ನಾವು ಎಲ್ಲಾ ಧರ್ಮ, ಮತೀಯರೂ ಸಮಾನ ಹಕ್ಕುಗಳನ್ನು ಹೊಂದಿರುವುದನ್ನು ಬಯಸುತ್ತೇವೆ. ನೀವು ಈ ದೇಶದ ಜನರು, ನನಗೆ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ಇಲ್ಲಿ ನಿಮಗೂ ಇದೆ ಎಂದು ಹಿಂದೂ ಸಮುದಾಯಕ್ಕೆ ಶೇಖ್ ಹಸೀನಾ ಹೇಳಿರುವುದನ್ನು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

Leave a Comment

Your email address will not be published. Required fields are marked *