Ad Widget .

ಆರ್ ಜೆ ತ್ರಿಶುಲ್ ವಿರುದ್ಧ ಪೊಲೀಸ್ ದೂರು/ಅಡ್ತಲೆ ನಾಗರಿಕ ಹಿತರಕ್ಷಣ ವೇದಿಕೆ ತೀವ್ರ ಖಂಡನೆ

Ad Widget . Ad Widget .

ಆರ್ ಜೆ ತ್ರಿಶುಲ್ ಅವರು, ಅವರ ಊರಿನಲ್ಲಿ ಅಭಿವೃದ್ಧಿ ಹೊಂದದೆ ಇರುವ ಬಗ್ಗೆ ಕಾಳಜಿ ವಹಿಸಿ ಜನರ ಪರವಾಗಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರತಿನಿದಿನಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಅವರ ಆತ್ಮ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡುವುದು ಪ್ರಜಾ ಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ.
ಅರಂತೋಡು ಎಲಿಮಲೆ ರಸ್ತೆಯ ಬಗ್ಗೆ, ಅರಮನೆಗಾಯ ತೂಗು ಸೇತುವೆ ಬಗ್ಗೆ ನಮ್ಮೂರಿನ ಜನತೆಯೇ ಕೇಳಿಕೊಂಡ ತಕ್ಷಣ ತಮ್ಮ ಅಮೂಲ್ಯ ಸಮಯವನ್ನು ನಮ್ಮ ಊರಿನ ಅಭಿವೃದ್ಧಿಗೆ ಮೀಸಲಿಟ್ಟು ವಿಡಿಯೋ ಮಾಡಿ ಹಾಕಿದ್ದಾರೆ.ಅವರಿಗೆ ನಮ್ಮೂರಿನ ಜನತೆಯ ಪರವಾಗಿ ಧನ್ಯವಾದ ಅರ್ಪಿಸುತ್ತೇವೆ.
ಪ್ರದಾನ ಮಂತ್ರಿಯವರೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಮೋದಿ ಹೆಸರಲ್ಲಿ ಮತ ಪಡೆಯುವ ಕಾರ್ಯ ಮಾತ್ರ ನಡೆಯಬಾರದು ಅವರ ಆಶಯದಂತೆ, ಡಿಜಿಟಲ್ ಇಂಡಿಯಾ ಜೊತೆ ಕೈ ಜೋಡಿಸಿ.
ಸುಳ್ಯದಲ್ಲಿ ಮುಖಂಡರ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಅಂದರೆ,ಅಭಿವೃದ್ಧಿಆಗದೆ ಇರುವ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಬ್ಯಾನರ್ ಅಳವಡಿಸಿದರೆ ರಾಜಕೀಯ ಷಡ್ಯಂತ್ರ, ಇನ್ನೊಂದು ಪಕ್ಷದ ಏಜೆಂಟ್ ಎಂಬ ಪಟ್ಟ ಕಟ್ಟುವುದನ್ನು ಮಾತ್ರ ಮಾಡುತ್ತಿದೆ.
ನಮ್ಮೂರಿನ ಜನಪ್ರತಿನಿದಿನಗಳು ಯಾಕೆ ಟೀಕೆಗಳನ್ನು ಸವಲಾಗಿ ಸ್ವೀಕಾರ ಮಾಡಿ ಅಭಿವೃದ್ಧಿ ಮಾಡುವ ಕಡೆ ಮನಸ್ಸು ಮಾಡುತ್ತಿಲ್ಲ.
ಆರ್ ಜೆ ತ್ರಿಶುಲ್ ವಿರುದ್ಧ ದೂರು ಕೊಟ್ಟಿರುವುದನ್ನು ನಾಗರಿಕ ಹಿತರಕ್ಷಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಸಾಮಾಜಿಕ ಹೋರಾಟಗಾರರ ಪರವಾಗಿ ಯಾವತ್ತೂ ವೇದಿಕೆ ಜೊತೆಯಾಗಿ ಇರುತ್ತದೆ.
ಎಂದು ನಾಗರಿಕ ಹಿತರಕ್ಷಣ ವೇದಿಕೆ ಅಡ್ತಲೆ ಇವರು ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *