Ad Widget .

ನಟ ಅನಿರುದ್ದ್ ಗೆ ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಗೇಟ್ ಪಾಸ್

ಸಮಗ್ರ ನ್ಯೂಸ್: ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ತಂಡದಲ್ಲಿ ಮನಸ್ತಾಪ ಕೇಳಿ ಬಂದಿದೆ. ಕಳೆದ ಹಲವು ದಿನಗಳಿಂದ ಪ್ರಸಾರವಾಗುತ್ತಿರುವ ವಿಭಿನ್ನ ಪ್ರೇಮ ಕಥೆ ಹೊಂದಿರುವ ಜೊತೆ ಜೊತೆಯಲಿ ಧಾರವಾಹಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

Ad Widget . Ad Widget .

ಆದರೆ ಇದೀಗ ಧಾರಾವಾಹಿ ತಂಡದಲ್ಲಿ ಮನಸ್ತಾಪ ಶುರುವಾಗಿದ್ದ ನಾಯಕನನ್ನು ಬದಲಾಯಿಸುತ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

Ad Widget . Ad Widget .

ಈ ಮೊದಲು ಜೊತೆ ಜೊತೆಯಲಿ ಧಾರವಾಹಿ ಟೀಂ ನಿಂದ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಹೊರ ಹೋಗುತ್ತಾರೆ ಎಂಬ ಮಾತುಕೇಳಿ ಬಂದಿತ್ತು. ಬಳಿಕ ಮೇಘಾ ಶೆಟ್ಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಇದೀಗ ಧಾರವಾಹಿಯ ಪ್ರಮುಖ ಪಾತ್ರಧಾರಿ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಹಾಗೂ ಧಾರವಾಹಿ ತಂಡದ ಮಧ್ಯೆ ಮನಸ್ತಾನ ಉಂಟಾಗಿದೆ ಎನ್ನಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ಅನಿರುದ್ಧ್ ಸೆಟ್ ನಲ್ಲಿಅಸಹಕಾರ ತೋರಿದ್ದಾರೆ ಎನ್ನಲಾಗುತ್ತಿದೆ. 150 ಸಂಚಿಕೆಗಳು ಮುಗಿದ ಬಳಿಕ ಅನಿರುದ್ಧ್ ವರ್ತನೆ ಮತ್ತಷ್ಟು ಬದಲಾಗಿದ್ದು ಇದರಿಂದ ಧಾರಾವಾಹಿ ತಂಡ ಬೇಸತ್ತು ಹೋಗಿತ್ತು. ಹೀಗಾಗಿ ಇಂದು ಧಾರಾವಾಹಿಯಿಂದಲೇ ಹೊರಹಾಕಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ನಟ ಅನಿರುದ್ಧ್ ಅವರನ್ನು ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ತಂಡ ಕೈ ಬಿಟ್ಟಿದ್ದು ತಂಡದ ಈ ನಿರ್ಧಾರವನ್ನು ಜೀ ಕನ್ನಡ ವಾಹಿನಿ ಕೂಡ ಸಮ್ಮತಿಸಿಕೊಂಡಿದೆ ಎನ್ನಲಾಗುತ್ತಿದೆ.’

Leave a Comment

Your email address will not be published. Required fields are marked *