Ad Widget .

ಮಂಗಳೂರು: ಗಾಂಜಾ ಗ್ಯಾಂಗ್ ನಿಂದ ಯುವಕನ ಮೇಲೆ ಮಾರಕ ದಾಳಿ

ಸಮಗ್ರ ನ್ಯೂಸ್: ಮಂಗಳೂರು ನಗರದ ಹೊರವಲಯದ ವಳಚ್ಚಿಲ್ ನಲ್ಲಿ ಗಾಂಜಾ ಗ್ಯಾಂಗೊಂದು ಯುವಕನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಯುವಕನ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

Ad Widget . Ad Widget .

ಘಟನೆಯ ವಿವರ:ನಿನ್ನೆ(ಆ.19) ರಾತ್ರಿ ಮನೆಗೆ ಸಾಮಾನು ತರಲು ಅಂಗಡಿಗೆ ತೆರಳಿದ್ದ ಮಿಫ್ತಾಹ್(16) ಎಂಬ ಬಾಲಕನನ್ನು ತಡೆದಿದ್ದ ಗಾಂಜಾ ಗ್ಯಾಂಗ್ ಮಾರಕಾಸ್ರ್ತಗಳಿಂದ ಹಲ್ಲೆನಡೆಸಲು ಯತ್ನಿಸುತ್ತಿದ್ದ ಸಂದರ್ಭ ತಡೆಯಲು ಬಂದ ಯುವಕನ ಮಾವ ಆಸೀಫ್(30) ಎಂಬವರ ಮೇಲೆ ತಂಡ ಏಕಾಏಕಿ ತಲವಾರು ಹಾಗೂ ಇನ್ನಿತರ ಮಾರಕಾಸ್ರ್ತಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿದೆ.

Ad Widget . Ad Widget .

ಘಟನೆಯಲ್ಲಿ ಆಸೀಫ್ ಗಂಭೀರ ಗಾಯಗೊಂಡಿದ್ದು ನಗರದ ಒಮೇಗಾ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ದಾಖಲಾಗಿದ್ದಾರೆ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಿಸ್ತಾ, ಮನ್ಸೂರು ಯಾನೆ ಹುಸೈನ್ ಹಾಗೂ ಆಶಿಕ್ ಪ್ರಮುಖ ಆರೋಪಿಗಳಾಗಿದ್ದಾರೆ. ಆರೋಪಿ ಆಶಿಕ್ ಎಂಬವನನ್ನು ಬಂಧಿಸಲಾಗಿದೆ ಇವರು ಮಂಗಳೂರು ಹಾಗೂ ಆಸುಪಾಸಿನ ಕಾಲೇಜಿನ ವಿದ್ಯಾರ್ಥಿಗಳಿಗೆ ನಿರಂತರವಾಗಿ ಗಾಂಜ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತರೆಂದು ತಿಳಿದು ಬಂದಿದೆ. ದ,ಕ ಜಿಲ್ಲೆಯಲ್ಲಿ ಹಲವು ಠಾಣೆಗಳಲ್ಲಿ ಕಳವು,ಕೊಲೆ,ದರೋಡೆ,ಇನ್ನಿತರ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಆರೋಪಿ ಮಿಸ್ತಾನ ಅಣ್ಣ ಹಲವು ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದಾನೆ.

Leave a Comment

Your email address will not be published. Required fields are marked *