Ad Widget .

ಕಡಬ: ರಸ್ತೆಯಿಲ್ಲದೆ ರೋಗಿಷ್ಟ ತಾಯಿಯನ್ನು ಆಸ್ಪತ್ರೆಗೆ ಹೊತ್ತು ಸಾಗಿಸಿದ ಮಕ್ಕಳು| ಸಚಿವ ಎಸ್.ಅಂಗಾರರ ಕ್ಷೇತ್ರದಲ್ಲಿ ಮತ್ತೊಂದು ಕರುಣಾಜನಕ ದುಸ್ಥಿತಿ

ಸಮಗ್ರ ನ್ಯೂಸ್: ರಸ್ತೆ ಸಂಪರ್ಕವಿಲ್ಲದೆ ರೋಗಪೀಡಿತ ವೃದ್ಧ ತಾಯಿಯನ್ನು ಮಕ್ಕಳು ಹೊತ್ತುಕೊಂಡು ಆಸ್ಪತ್ರೆಗೆ ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . Ad Widget .

ಈ ಘಟನೆಯು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ಕಲ್ಲುಗುಡ್ಡೆ ಸಮೀಪದ ಬಳಕ್ಕ ಎಂಬಲ್ಲಿ ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರೊಂದಿಗೆ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ.

Ad Widget . Ad Widget .

ಘಟನೆಯ ವಿವರ:
ಕಡಬ ತಾಲೂಕಿನ ಕಲ್ಲುಗುಡ್ಡೆ-ನೂಜಿಬಾಳ್ತಿಲ -ಬಳಕ್ಕ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಮಳೆಯಿಂದಾಗಿ ಹದಗೆಟ್ಟು ಹೋಗಿದೆ. ಇಲ್ಲಿನ ಜನರು ತಮ್ಮ ತಮ್ಮ ವಾಹನಗಳನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ನಡೆದುಕೊಂಡೇ ಮನೆ ಸೇರುತ್ತಿದ್ದಾರೆ.

ಆಗಸ್ಟ್ 19ರಂದು ಇಲ್ಲಿನ ನಿವಾಸಿ ಅನಾರೋಗ್ಯ ಪೀಡಿತ ವೃದ್ಧೆಯನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಅವಶ್ಯಕತೆ ಬಂದಿದ್ದು, ರಸ್ತೆ ಅಭಿವೃದ್ಧಿ ಇಲ್ಲದ ಕಾರಣ ವಾಹನಗಳ ಓಡಾಟ ಕಷ್ಟಕರವಾಗಿದೆ.

ಕೂಡಲೇ ಮನೆ ಮಂದಿ ವೃದ್ಧೆಯನ್ನು ಮರದ ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಸುಮಾರು ಎರಡು ಕಿ.ಮೀ ವರೆಗೆ ಹೊತ್ತುಕೊಂಡೇ ಸಾಗಿದ್ದು ಬಳಿಕ ವಾಹನದ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ರಸ್ತೆಯ ಅವ್ಯವಸ್ಥೆಯನ್ನು ಕಂಡೂ ಕಾಣದಂತಿರುವ ಜನಪ್ರತಿನಿಧಿಗಳಿಗೆ ಧಿಕ್ಕಾರ ಕೇಳಿಬಂದಿದೆ.

Leave a Comment

Your email address will not be published. Required fields are marked *