Ad Widget .

ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಈ ಆಟಗಾರರು ಮಾಡಿದ್ದೇನು ಗೊತ್ತಾ? ವಿಡಿಯೋ ವೈರಲ್

ಸಮಗ್ರ ನ್ಯೂಸ್: ಜಿಂಬಾಬ್ವೆ ವಿರುದ್ಧ ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್​​ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

Ad Widget . Ad Widget .

ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಆದರೆ, ಪಂದ್ಯಾರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಕೆ. ಎಲ್.ರಾಹುಲ್ ನಡೆದುಕೊಂಡ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ.

Ad Widget . Ad Widget .

ಚ್ಯುಯಿಂಗ್ ಗಮ್ ಬಿಸಾಡಿದ ರಾಹುಲ್: ಕ್ರಿಕೆಟ್ ಪಂದ್ಯ ಶುರುವಾಗುವುದಕ್ಕೂ ಮುಂಚಿತವಾಗಿ ಉಭಯ ದೇಶಗಳ ರಾಷ್ಟ್ರಗೀತೆ ಹಾಡುವುದು ಸಂಪ್ರದಾಯ. ನಿನ್ನೆಯೂ ಭಾರತ-ಜಿಂಬಾಬ್ವೆ ನಡುವಿನ ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲಾಯಿತು. ಈ ವೇಳೆ ಚ್ಯೂಯಿಂಗ್ ಗಮ್​ ಜಗಿಯುತ್ತಿದ್ದ ರಾಹುಲ್​, ಇನ್ನೇನು ರಾಷ್ಟ್ರಗೀತೆ ಆರಂಭವಾಗಲಿದೆ ಎಂಬುದು ಗೊತ್ತಾಗುತ್ತಿದ್ದಂತೆ ತೆಗೆದು ಎಸೆದಿದ್ದಾರೆ. ಈ ಮೂಲಕ ಗೌರವ ನೀಡಿದ್ದಾರೆ.

ಕೆ ಎಲ್ ರಾಹುಲ್​​ ನಡೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಹೊಗಳಿದ್ದು, ನಿಮ್ಮಿಂದ ನಮಗೆ ಮತ್ತಷ್ಟು ಹೆಮ್ಮೆಯಾಗುತ್ತಿದೆ ಎಂದು ಟ್ವೀಟ್‌ಗಳನ್ನು ಮಾಡಿದ್ದಾರೆ.

ಇಶಾನ್ ಮೇಲೆ ಕೀಟದಾಳಿ: ರಾಷ್ಟ್ರಗೀತೆ ನಡೆಯುತ್ತಿದ್ದಾಗ ಟೀಂ ಇಂಡಿಯಾ ಸ್ಟಾರ್ ಬ್ಯಾಟರ್​ ಇಶಾನ್ ಕಿಶನ್ ಹತ್ತಿರ ಕೀಟವೊಂದು ಸುಳಿದಾಡಿ ಕಣ್ಣಿಗೆ ತಾಗಿದೆ. ಇದರಿಂದ ಅರೆಕ್ಷಣ ಗಲಿಬಿಲಿಗೊಂಡು ಪಕ್ಕದಲ್ಲಿ ನಿಂತುಕೊಂಡಿದ್ದ ಕುಲ್ದೀಪ್ ಯಾದವ್​ ಅವರ ಕಡೆ ನೋಡಿ, ತದನಂತರ ಸುಮ್ಮನೆ ನಿಂತುಕೊಂಡರು.

ಹರಾರೆ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 189ರನ್​​​ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 30.5 ಓವರ್​​ಗಳಲ್ಲಿ ಯಾವುದೇ ವಿಕೆಟ್​ ನಷ್ಟವಿಲ್ಲದೆ 192ರನ್​ ಗಳಿಸುವ ಮೂಲಕ ಜಯ ದಾಖಲಿಸಿದೆ. ಭಾರತದ ಪರ ಶಿಖರ್ ಧವನ್ 113 ಎಸೆತದಲ್ಲಿ 9 ಬೌಂಡರಿಗಳ ನೆರವಿನಿಂದ 81 ರನ್ ಮತ್ತು ಶುಭಮನ್ ಗಿಲ್​ 72 ಎಸೆತದಲ್ಲಿ 10 ಬೌಂಡರಿ​ ಮತ್ತು 1 ಸಿಕ್ಸರ್ ಮೂಲಕ 82 ರನ್ ಸಿಡಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ಮಾಡಿದರು. ಜಿಂಬಾಬ್ವೆ ತಂಡದ ಯಾವುದೇ ಬೌಲರ್​ ವಿಕೆಟ್ ಪಡೆದುಕೊಳ್ಳಲಿಲ್ಲ.

Leave a Comment

Your email address will not be published. Required fields are marked *