ರೈಲು ಪ್ರಯಾಣಿಕರಿಗೆ ಕೇಂದ್ರ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ. ಹಿರಿಯರ ರಿಯಾಯಿತಿ ಟಿಕೆಟ್ ದರದಲ್ಲಿನ ಕೆಲ ನಿಗಮಗಳನ್ನು ಬದಲಾಯಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.
ಕೊರೋನಾ ಸಮಯದಲ್ಲಿ ಹಿರಿಯ ನಾಗರೀಕರು ಸೇರಿದಂತೆ ಇತರ ಆಯ್ದ ವರ್ಗಗಳ ಪ್ರಯಾಣದ ಟಿಕೆಟ್ ದರದಲ್ಲಿ ರಿಯಾಯಿತಿ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸ್ಥಗತಗೊಳಿಸಲಾಗಿದ್ದ ಹಿರಿಯರು, ಕ್ರೀಡಾಪಟುಗಳು ಹಾಗೂ ಇತರ ಆಯ್ದ ವರ್ಗಗಳ ರಿಯಾಯಿತಿ ಟಿಕೆಟ್ ದರ ಯೋಜನೆನ್ನು ಮತ್ತೆ ಆರಂಭಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.
ಹಿರಿಯರ ರಿಯಾಯಿತಿ ಟಿಕೆಟ್ ದರದಲ್ಲಿ ಮಹಿಳೆಯರಿಗೆ ಕನಿಷ್ಠ 58 ವರ್ಷ ಹಾಗೂ ಪುರುಷರಿಗೆ ಕನಿಷ್ಠ 60 ವರ್ಷ ವಯೋಮಿತಿ ನಿಗದಿಪಡಿಸಲಾಗಿತ್ತು. ಈ ವಯೋಮಿತಿಯಲ್ಲಿ ಕೆಲ ಬದಲಾವಣೆಗ ಆಗ್ರಹ ಕೇಳಿಬಂದ ಹಿನ್ನಲೆಯಲ್ಲಿ ರೈಲ್ವೇ ಇಲಾಖೆ ಈ ಕುರಿತು ಪರಿಶೀಲನೆ ನಡೆಸಿ ನಿರ್ಧಾರ ಪ್ರಕಟಿಸಲಿದೆ. ಇದರ ಜೊತೆಗೆ ವಯೋವೃದ್ಧರಿಗೆ ನೀಡುವ ಸಬ್ಸಿಡಿಯನ್ನು ಉಳಿತಾಯ ಮಾಡಿ ಈ ಹಣವನ್ನು ರಿಯಾಯಿತಿ ದರದಲ್ಲಿ ಟಿಕೆಟ್ ಯೋಜನೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಎಲ್ಲಾ ರೈಲುಗಳಲ್ಲಿ ಪ್ರಿಮಿಯಂ ತಾತ್ಕಾಲ್ ಯೋಜನೆ ಜಾರಿಗೊಳಿಸಲು ಕೇಂದ್ರ ನಿರ್ಧರಿಸಿದೆ.