ಬಾಡಿಗೆದಾರ ಮಾಲಿಕನನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಶವದ ಜೊತೆ ಸೆಲ್ಫಿ

ದಿಲ್ಲಿ; ಬಾಡಿಗೆದಾರನೊಬ್ಬ ತನ್ನ ಮಾಲೀಕನನ್ನು ಸುತ್ತಿಗೆಯಿಂದ ಹೊಡೆದು, ಶವದ ಜೊತೆ ಸೆಲ್ಫಿ ತೆಗೆದುಕೊಂಡ ಘಟನೆಯೊಂದು ದಿಲ್ಲಿಯಲ್ಲಿ ನಡೆದಿದೆ.

Ad Widget ... ..

ಪಂಕಜ್‌ ಕುಮಾರ್‌ ಎನ್ನುವ ಆರೋಪಿ ಸುರೇಶ್‌ ಎಂಬವರ ವ್ಯಕ್ತಿ ಮನೆಗೆ ಬಾಡಿಗೆಗೆ ಬಂದಿದ್ದ. ಆತನಿಗೆ ಮನೆಯಲ್ಲಿ ಮದ್ಯ ಸೇವನೆ ಮಾಡುವ ಹಾಗಿಲ್ಲ ಅಂತ ಹೇಳಲಾಗಿತ್ತು.

Ad Widget

ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿ, ಪಂಕಜ್‌ ಮಾಲೀಕನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಒಂದು ದಿನದ ಬಳಿಕ ಮಾಲೀಕನ ಮನೆಗೆ ಕಾಲ್‌ ಮಾಡಿ ತಾನು ಮನೆ ಖಾಲಿ ಮಾಡಿದ್ದಾಗಿ ಹೇಳಿದ್ದಾನೆ. ನಂತರ ಮೃತ ಮಾಲೀಕನ ಮಗ, ಪಂಕಜ್‌ ಇದ್ದ ಮನೆಗೆ ಹೋದಾಗ, ತಂದೆಯನ್ನು ಹತ್ಯೆ ಮಾಡಿದ ವಿಷಯ ಗೊತ್ತಾಗಿದೆ.

ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಇನ್ನು ಅರೋಪಿ ಪಂಕಜ್‌ನನ್ನ ಪೊಲೀಸರು ಈಗಾಗಲೇ ಅರೆಸ್ಟ್‌ ಮಾಡಿದ್ದಾರೆ.

Leave a Comment

Your email address will not be published. Required fields are marked *