Ad Widget .

ಆರ್ ಜೆ ತ್ರಿಶೂಲ್ ವಿರುದ್ದ ಸುಳ್ಯ ನ.ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ದೂರು| ಸಾಮಾಜಿಕ ಕಳಕಳಿಯನ್ನು ಹತ್ತಿಕ್ಕುವ ಪ್ರಯತ್ನವೇ?

ಸಮಗ್ರ ನ್ಯೂಸ್: ಮತ ಹಾಕಿ ಅಧಿಕಾರಕ್ಕೆ ಏರಿಸಿದ ಮತದಾರರಿಗೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರವೂ ಇರುತ್ತದೆ. ಆದರೆ ನಮ್ಮ ಸುಳ್ಯದ ವಿಷಯದಲ್ಲಿ ಇದು ಹಾಗಾಗದು. ಯಾಕೆಂದರೆ ಇಲ್ಲಿ ನೀವು ಓಟು ಮಾತ್ರ ನೀಡಬಹುದು. ಆದರೆ ಮುಂದುವರಿದು ಗೆದ್ದ ನಮ್ಮನ್ನು ಕೆಲಸ ಮಾಡದಿದ್ದರೆ ಪ್ರಶ್ನಿಸಬಾರದು. ಹಾಗೇನಾದರೂ ಪ್ರಶ್ನಿಸಿದಲ್ಲಿ ನೀವು ವಿರೋದ ಪಕ್ಷಗಳ ಗುಲಾಮರಾಗ್ತೀರಾ. ಅಥವಾ ಕಮ್ಯೂನಿಸ್ಟ್‌ ಆಗ್ತೀರಾ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹೌದು, ಸುಳ್ಯದಲ್ಲಿ ಕಳೆದ‌ ಕೆಲವು ದಿನಗಳಿಂದ ಸುದ್ದಿ ಮಾಡ್ತಿರೋದು ನ.ಪಂ ಅಧ್ಯಕ್ಷರು ಮತ್ತು ಸಾಮಾಜಿಕ ಜವಾಬ್ದಾರಿ ಹೊಂದಿರುವ ಯುವಕನೋರ್ವನ ನಡುವಿನ ಸೋಶಿಯಲ್ ಮೀಡಿಯಾ ವಾರ್. ಸಾಮಾಜಿಕ ಜವಾಬ್ದಾರಿಯಿಂದ ಪ್ರಶ್ನೆಗಳನ್ನೆತ್ತಿದ ಆರ್.ಜೆ ತ್ರಿಶೂಲ್ ಗೌಡ ಇದೀಗ ಆಡಳಿತ ವರ್ಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Ad Widget . Ad Widget . Ad Widget .

ವಿಷ್ಯ ಏನೆಂದ್ರೆ ಸುಳ್ಯ ನಗರದ ಹಲವೆಡೆ ಎದ್ದಿರುವ ರಸ್ತೆಗುಂಡಿಗಳ ಬಗ್ಗೆ ತ್ರಿಶೂಲ್ ಗೌಡ ಸೋಶಿಯಲ್ ಮೀಡಿಯಾಗಳ ಮೂಲಕ ಧ್ವನಿ ಎತ್ತಿದ್ದು ಇದಕ್ಕೆ ಪ್ರತ್ಯುತ್ತರವಾಗಿ ನ.ಪಂ ಅಧ್ಯಕ್ಷ ವಿನಯಕುಮಾರ್ ಎಂಬವರು ‘ಕೀಬೋರ್ಡ್ ವಾರಿಯರ್’ ಎಂದು ಛೇಡಿಸಿದ್ದರು.

ಇದೇ ಜಟಾಪಟಿ ಮುಂದುವರಿದು ತ್ರಿಶೂಲ್ ನೇರವಾಗಿ ವಿನಯಕುಮಾರ್ ರವರನ್ನು ತರಾಟೆಗೆ ತೆಗೆದುಕೊಂಡು ಇಬ್ಬರ ನಡುವೆಯೂ ಮಾತಿನ ಸಮರ ನಡೆದಿತ್ತು. ಇದು ಇನ್ನೂ ಮುಂದೆ ಹೋಗಿ ಸುದ್ದಿಯಾಗಿದ್ದು, ತ್ರಿಶೂಲ್ ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ನಾಗರಿಕರ ಬೆಂಬಲವೂ ಸಿಕ್ಕಿತ್ತು.

ಒಬ್ಬ ಜನಪ್ರತಿನಿಧಿಯಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕಾದ ವಿನಯಕುಮಾರ್ ಕಂದಡ್ಕ ಅಡಿಕೆ, ಕಾಳುಮೆಣಸು ಎಂದು ವೈಯಕ್ತಿಕವಾಗಿ ಈ ವಿಚಾರವನ್ನು ತೆಗೆದುಕೊಂಡರು.

‘ಸರ್ಕಾರದ ಅನುದಾನವೆಂದರೆ ಅಡಿಕೆ ಮಾರಿ ಕೆಲಸ ಮಾಡಿದಂತಲ್ಲ, ಅದಕ್ಕೆ ಅದರದ್ದೇ ಆದ ಮಾರ್ಗಸೂಚಿ ಇದೆ’ ಎಂದು ವಿನಯಕುಮಾರ್ ಹೇಳಿದ್ದು, ಇದಕ್ಕೆ ತ್ರಿಶೂಲ್ ರವರು ವಿನಯಕುಮಾರ್ ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದರು.

ಇದು ಇಷ್ಟಕ್ಕೇ ಮುಗಿದರೆ ಪರವಾಗಿರಲಿಲ್ಲ. ಇದೀಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ವಿನಯಕುಮಾರ್ ಸುಳ್ಯ‌ ಠಾಣೆಗೆ ದೂರು ನೀಡಿದ್ದು, ಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನದಂತೆ ಕಾಣುತ್ತಿದೆ.

ಈ ವಿಚಾರವೀಗ ಸಾರ್ವಜನಿಕ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ತ್ರಿಶೂಲ್ ಪರವಾಗಿ ಜನರು ಬೆಂಬಲಕ್ಕೆ ನಿಂತಿದ್ದಾರೆ. ಸದ್ಯ ತ್ರಿಶೂಲ್ ಗೆ ಪೊಲೀಸ್ ಠಾಣೆಯಿಂದ ವಿಚಾರಣೆಗೆ ಕರೆ ಬಂದಿದ್ದು, ಅಧಿಕೃತ ನೊಟೀಸ್ ಬಂದರಷ್ಟೇ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಒಟ್ಟಾರೆ ಜನಪ್ರತಿನಿಧಿಗಳ ಧಮನಕಾರಿ ವಿಚಾರಗಳು ಅವರಿಗೇ ಮುಳುವಾಗುತ್ತಿರುವುದು ವಿಪರ್ಯಾಸ.

Leave a Comment

Your email address will not be published. Required fields are marked *