ಸುಳ್ಯದ ಶ್ರೀರಾಂ ಪೇಟೆಯಿಂದ ಜೂನಿಯರ್ ಕಾಲೇಜಿಗೆ ತಿರುಗುವ ರಸ್ತೆಯ ಜಂಕ್ಷನ್ ನಲ್ಲಿ ದೊಡ್ಡ ಗುಂಡಿಯಾಗಿದ್ದು ಈ ಕುರಿತು ಆರ್ ಜೆ. ತ್ರಿಶೂಲ್ ಅವರು ಇತ್ತೀಚೆಗೆ ರಸ್ತೆ ಆವ್ಯವಸ್ಥೆಯ ಕುರಿತು ವಿಡಿಯೋ ಬಿಟ್ಟಿದ್ದರು ಮತ್ತು ಅವರಿಬ್ಬರೂ ಕರೆಯ ಮೂಲಕ ಮಾತನಾಡುವ ಆಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.
ಆಡಿಯೋದಲ್ಲಿ ಆರ್ ಜೆ . ತ್ರಿಶೂಲ್ ಅವರು ಅಧ್ಯಕ್ಷರಲ್ಲಿ ಅಷ್ಟು ದೊಡ್ಡ ದೊಡ್ಡ ಗುಂಡಿಗಳಿದೆ. ಅದನ್ನು ಸರಿಪಡಿಸಿ ಜನರಿಗೆ ತೊಂದರೆಯಾಗುತ್ತದೆ ಎಂದು ಹೇಳಿದಾಗ ನಗರ ಪಂಚಾಯತ್ ಅಧ್ಯಕ್ಷರಾದ ವಿನಯಕುಮಾರ್ ಕಂದಡ್ಕರವರು ಹೇಳಿರುವಂತಹ ಮಾತು ನಮ್ಮ ಮನೆ ಅಡಿಕೆ ಮಾರಿ ಅಲ್ಲಿಗೆ ಡಾಮರು ಹಾಕುವುದಲ್ಲ ಎಂದು ಹೇಳಿದ್ದರು.
ಒಬ್ಬ ಜವಾಬ್ದಾರಿ ಇರುವಂತ ಅಧ್ಯಕ್ಷ ಈ ರೀತಿ ಮಾತನಾಡುವುದು ಸರಿಯಲ್ಲ.
ಇದನ್ನು ನಾವು ಖಂಡಿಸುತ್ತೇವೆ ಮತ ಕೊಟ್ಟು ಗೆಲ್ಲಿಸಿ ಜನರ ಸೇವೆ ಮಾಡುತ್ತಾರೆ ಎಂದು ಗೆಲ್ಲಿಸಿರುತ್ತೇವೆ. ಗೆದ್ದಮೇಲೆ ಈ ರೀತಿ ಮಾತನಾಡುವುದು ಸರಿಯಲ್ಲ.
ಯಾರು ಕೂಡ ಅಡಿಕೆ ಮಾರಿ ಡಾಮರಿಕರಣ ಮಾಡುವ ಅಗತ್ಯ ಇಲ್ಲ ಜನರ ತೆರಿಗೆ ಹಣದಿಂದ ಅನುದಾನ ಬರುತ್ತದೆ ನಿಮ್ಮ ಸಂಬಳ ಕೂಡ ಜನರ ತೆರಿಗೆ ಹಣದಿಂದ ಬರುತ್ತದೆ. ನಗರದಲ್ಲಿ ಎಲ್ಲಿಯೂ ಕೂಡ ಫುಟ್ಬಾತ್ ಸ್ಲಾಪ್ ಕಲ್ಲುಗಳು ಸರಿ ಇಲ್ಲ. ಮುರಿದು ಹೋಗಿ ಎಷ್ಟೋ ಜನ ಕಾಲು ಮುರಿದು ಕೊಂಡಿದ್ದಾರೆ ಮತ್ತು ಸರಕಾರಿ ಬಸ್ ನಿಲ್ದಾಣ ಬಳಿ ಎಷ್ಟೋ ತಿಂಗಳಿಗಳಿಂದ ಗುಂಡಿಯಾಗಿತ್ತು. ಅದನ್ನು ಪ್ರತಿಭಟನೆ ಮಾಡಿದ ನಂತರ ನಗರ ಪಂಚಾಯತಿನವರು ಸರಿ ಮಾಡಿದ್ದಾರೆ.
ಗಾಂಧಿನಗರದ ರೋಡಿನಲ್ಲಿ ದೊಡ್ಡದೊಂದು ಗುಂಡಿ ಇತ್ತು ಅಲ್ಲಿ ಕೂಡ ಹಲವಾರು ಗಾಡಿ ಗುಂಡಿಗೆ ಬಿತ್ತಿತ್ತು ಆಗ ಕೂಡ ಪ್ರತಿಭಟನೆ ಮಾಡಿದ ನಂತರ ಅದನ್ನು ಕೂಡ ಸರಿಪಡಿಸಿದ್ದರು. ಈಗ ಶ್ರೀರಾಮ್ ಪೇಟೆಯಲ್ಲಿ ಹಲವು ತಿಂಗಳಗಳಿಂದ ರಸ್ತೆಯಲ್ಲಿ ದೊಡ್ಡ ಗುಂಡಿಯಾಗಿ ಹಲವಾರು ಬಾರಿ ಗಾಡಿ ಡಿಕ್ಕಿಯಾಗಿದೆ. ಬೇಸಿಗೆಯಲ್ಲಿ ಆಗಿದ್ದರೂ ಕೂಡ ನಗರ ಪಂಚಾಯಿತಿನವರು ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಆದಕಾರಣ ಆರ್ ಜೆ. ತ್ರಿಶೂಲ್ ಅವರು ಅವರ ತಮ್ಮ ಮನೆಗೋಸ್ಕರ ವಿಡಿಯೋ ಮತ್ತು ಆಡಿಯೋ ಮಾಡಿದ್ದಲ್ಲ ಇಡೀ ನಮ್ಮ ಸಾರ್ವಜನಿಕಗೋಸ್ಕರು ಈ ರೋಡಿನಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿ ಈ ರೀತಿ ವಿಡಿಯೋ ಆಡಿಯೋ ಮಾಡಿದ್ದಾರೆ.
ನ್ಯಾಯ ಕೇಳುವುದು ತಪ್ಪಾ ಆದಕಾರಣ ಆರ್ ಜೆ. ತ್ರಿಶೂಲ್ ಅವರ ಮೇಲೆ ಕೊಟ್ಟಂತ ದೂರಿನಲ್ಲಿ ಏನಾದರೂ ಅವರಿಗೆ ತೊಂದರೆಯಾದರೆ ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಸುಳ್ಯ ನಗರ ಪಂಚಾಯತ್ ಮುಂಬಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಮಾಧ್ಯಮದ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.