Ad Widget .

ಬಾಬಾ ಬುಡನ್ ಗಿರಿ ದರ್ಗಾದಲ್ಲಿ ವೈದಿಕ ಆಚರಣೆಗಳಿಗೆ ಅವಕಾಶ| ಸೌಹಾರ್ದ ಕೆಡಿಸುವ ಹುನ್ನಾರ ಎಂದ ಪಿಎಫ್ಐ

ಸಮಗ್ರ ನ್ಯೂಸ್: ಬಾಬಾ ಬುಡನ್ ಗಿರಿ ದರ್ಗಾದಲ್ಲಿ ವೈದಿಕ ಆಚರಣೆಗಳಿಗೆ ಅವಕಾಶ ನೀಡಿ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಕೆಡಿಸುವ ಬಿಜೆಪಿ ಸರಕಾರದ ಕೋಮುವಾದಿ ನಡೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget . Ad Widget .

ಬಿಜೆಪಿ-ಸಂಘಪರಿವಾರವು ದಕ್ಷಿಣ ಭಾರತದಲ್ಲಿ ಹಿಂದುತ್ವ ಫ್ಯಾಶಿಸ್ಟ್ ಅಜೆಂಡಾವನ್ನು ಬಲಪಡಿಸಲು ಸರ್ವಧರ್ಮೀಯರ ಶ್ರದ್ಧಾ ಕೇಂದ್ರವಾದ ಬಾಬಾ ಬುಡನ್ ಗಿರಿಯನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡಿತು. ಆ ಬಳಿಕ ದತ್ತ ಮಾಲಾ, ದತ್ತ ಜಯಂತಿ ಹೆಸರಿನಲ್ಲಿ ಸಂಘಪರಿವಾರದ ಸಂಘಟನೆಗಳು ಕೋಮು ವೈಷಮ್ಯವನ್ನು ಹರಡುತ್ತಾ ಬಾಬಾ ಬುಡನ್ ಗಿರಿಯನ್ನು ವಿವಾದ ತಾಣವನ್ನಾಗಿ ಮಾರ್ಪಡಿಸಿದವು. ಇದೀಗ ಬಿಜೆಪಿ ಸರಕಾರವು ವ್ಯವಸ್ಥಾಪನಾ ಸಮಿತಿಯ ಮೂಲಕ ಇಲ್ಲದ ಆಚರಣೆಗಳಿಗೆ ಅವಕಾಶ ಕಲ್ಪಿಸಿರುವುದು ಕಾನೂನು ಬಾಹಿರವಾಗಿದೆ. ಇನ್ನು ಪ್ರತ್ಯೇಕ ಅರ್ಚಕರನ್ನು ನೇಮಿಸುವ ನಿರ್ಧಾರವೂ ಸೂಫಿ ಪರಂಪರೆಗೆ ವಿರುದ್ಧವಾಗಿದೆ.

Ad Widget . Ad Widget .

ಈ ನಿರ್ಧಾರದ ಮೂಲಕ ಮುಜಾವರ್ ಹಾಗೂ ಶಾಕಾದ್ರಿಗಳ ಆಡಳಿತಾತ್ಮಕ ಮತ್ತು ಧಾರ್ಮಿಕ ಅಧಿಕಾರವನ್ನು ಮೊಟಕುಗೊಳಿಸಲಾಗಿದ್ದು, ಇದು ಸ್ಪಷ್ಟವಾಗಿ ಕಾನೂನಿನ ಉಲ್ಲಂಘನೆಯಾಗಿದೆ. ಬಿಜೆಪಿ ಸರಕಾರದ ಈ ನಿರ್ಧಾರದ ಮೂಲಕ ಬಾಬಾ ಬುಡನ್ ಗಿರಿಯನ್ನು ಕೋಮುವಾದೀಕರಣಗೊಳಿಸುವ ಸಂಘ ಪರಿವಾರದ ದುಷ್ಟ ಪ್ರಯತ್ನಕ್ಕೆ ಹಾದಿ ಸುಗಮಗೊಳಿಸಿದಂತಾಗಿದೆ ಎಂದು ನಾಸೀರ್ ಪಾಶಾ ಆರೋಪಿಸಿದ್ದಾರೆ.

Leave a Comment

Your email address will not be published. Required fields are marked *