Ad Widget .

ಮಹಾರಾಷ್ಟ್ರ ಕಡಲ ಕಿನಾರೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ತುಂಬಿದ ಬೋಟ್ ಗಳು ಪತ್ತೆ;

ಸಮಗ್ರ ನ್ಯೂಸ್: ಮಹಾರಾಷ್ಟ್ರದ ರಾಯಗಡ್​ ಜಿಲ್ಲೆಯ ಹರಿಹರೇಶ್ವರ ಕಡಲ ಕಿನಾರೆಯಲ್ಲಿ ಶಂಕಿ ಬೋಟ್​ಗಳು ಪತ್ತೆಯಾಗಿವೆ. ಆ ಬೋಟ್​ಗಳಲ್ಲಿ AK 47, ಹಲವು ರೈಫಲ್ಸ್​ ಹಾಗೂ ಬುಲೆಟ್​​ಗಳು ಪತ್ತೆಯಾಗಿವೆ. ಸ್ಥಳೀಯರಿಂದ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಪೊಲೀಸರು ಉಗ್ರರ ಬೋಟ್ ಇರಬಹುದು ಎಂದು ಶಂಕಿಸಿದ್ದಾರೆ.

Ad Widget . Ad Widget .

ಎರಡು ಬೋಟ್​ಗಳು ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ಬಗ್ಗೆ ರಾಯಗಡ ಎಸ್​ಪಿ ಅಶೋಕ್ ಧುಧೆ ಪ್ರತಿಕ್ರಿಯಿಸಿ, ಹರಿಹರೇಶ್ವರದ ಬೀಚ್ ಬಳಿ AK-47 ಗನ್ ಇರುವ ಬೋಟ್ ಪತ್ತೆಯಾಗಿದೆ. ಈ ಬಗ್ಗೆ ತನಿಖೆ ಶುರುವಾಗಿದೆ ಎಂದು ತಿಳಿಸಿದ್ದಾರೆ. ಕೆಲವು ವರದಿಗಳ ಪ್ರಕಾರ, ಆಸ್ಟ್ರೇಲಿಯಾ ನಿರ್ಮಿತ ಬೋಟ್ ಇದಾಗಿದೆ ಎನ್ನಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *