Ad Widget .

ಮಗಳ‌ ಮೇಲೆ ಕಣ್ಣು ಹಾಕಿದವನ ಮರ್ಮಾಂಗ ಕತ್ತರಿಸಿದ ತಾಯಿ!

ಸಮಗ್ರ ನ್ಯೂಸ್: ತನ್ನ 14 ವರ್ಷದ ಮಗಳ ಮೇಲೆ ಕಾಮದ ಕಣ್ಣು ಬೀರಿದ್ದಲ್ಲದೆ, ಆಕೆಯನ್ನು ರೇಪ್‌ ಮಾಡಲು ಯತ್ನಿಸಿದ ಲಿವ್‌ ಇನ್‌ ಪಾರ್ಟ್ನರ್‌ನ ಮರ್ಮಾಂಗವನ್ನೇ ತಾಯಿಯೊಬ್ಬಳು ಕತ್ತರಿಸಿದ ಪ್ರಕರಣ ಉತ್ತರ ಪ್ರದೇಶದ ಲಕೀಂಪುರ ಖೇರಿ ಜಿಲ್ಲೆಯ ಮಹದೇವ್‌ಗಂಜ್‌ನಲ್ಲಿ ನಡೆದಿದೆ.

Ad Widget . Ad Widget .

ಮದ್ಯವ್ಯಸನಿಯಾಗಿದ್ದ ಗಂಡನಿಂದ ದೂರವಾದ ಬಳಿಕ, ಕಳೆದ ಎರಡು ವರ್ಷಗಳಿಂದ 36 ವರ್ಷದ ಮಹಿಳೆ, 32 ವರ್ಷದ ಪುರುಷನೊಂದಿಗೆ ಲಿವ್‌ ಇನ್‌ ರಿಲೇಷನ್‌ಷಿಪ್‌ನಲ್ಲಿದ್ದರು. “ಘಟನೆಯ ಸಮಯದಲ್ಲಿ ನಾನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದೆ. ಅದೃಷ್ಟವಶಾತ್ ಸಕಾಲದಲ್ಲಿ ಮನೆಗೆ ಹಿಂತಿರುಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ನನ್ನ ಮಗಳನ್ನು ಉಳಿಸಲು ಯತ್ನಿಸುತ್ತಿದ್ದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಅಡುಗೆ ಮನೆಯಿಂದ ಚಾಕು ತಂದು ಆತನ ಮರ್ಮಾಂಗವನ್ನು ಕತ್ತರಿಸಿದ್ದೇನೆ. ನಾನು ಮಾಡಿರುವ ಕೆಲಸದ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ’ ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾಳೆ.

Ad Widget . Ad Widget .

32 ವರ್ಷದ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಲಖಿಂಪುರ ಠಾಣೆಯ ಎಸ್‌ಎಚ್‌ಒ ಚಂದ್ರಶೇಖರ್ ಸಿಂಗ್ ಸೈಡ್ ತಿಳಿಸಿದ್ದಾರೆ. ಆರೋಪಿಯ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *