Ad Widget .

ದೇಹದ ”ಹೀಟ್” ಕಡಿಮೆಗೊಳಿಸಲು ಮಡಿಕೇರಿಗೆ ತೆರಳಿದ ಕರಾವಳಿಯ ಭಿನ್ನ ಜೋಡಿಗಳು| ಹಿಂದೂ ಕಾರ್ಯಕರ್ತರಿಂದ ಸಿಕ್ತು ಸರಿಯಾದ ಆತಿಥ್ಯ!

ಸಮಗ್ರ ನ್ಯೂಸ್: ಕರಾವಳಿಯ ಮಂಗಳೂರು ಭಾಗದಿಂದ ಮಡಿಕೇರಿಗೆ ಅನ್ಯಧರ್ಮದ ಯುವತಿಯರನ್ನು ಕರೆದುಕೊಂಡು ಹೋದ ಯುವಕರಿಬ್ಬರಿಗೆ ಅಲ್ಲಿನ ಹಿಂದೂ ಸಂಘಟನೆಗಳ ಕಾರ್ಯಕರ್ತರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

Ad Widget . Ad Widget .

ಇಬ್ಬರು ಯುವತಿಯರನ್ನು ಕರೆದುಕೊಂಡು ಹೋದ ಅನ್ಯಧರ್ಮದ ಯುವಕರು ಮಡಿಕೇರಿ ಆಸುಪಾಸಿನಲ್ಲಿ ತಿರುಗಾಡುತ್ತಿದ್ದಾಗ ಧರ್ಮದೇಟು ನೀಡಿದ್ದಾರೆ.

Ad Widget . Ad Widget .

ಇದರಲ್ಲಿ ಹಿಂದೂ ಧರ್ಮದ ಯುವಕನು ಕೂಡಾ ಸಹಕರಿಸಿದ್ದ ಎಂದು ತಿಳಿದು ಬಂದಿದೆ. ಕೆಎ 20 ರಿಜಿಸ್ಟ್ರೇಷನ್ ಹೊಂದಿದ್ದ ಹುಂಡೈ ಐ 20 ಕಾರಿನಲ್ಲಿ ಮುಸ್ಲಿಂ ಯುವಕರ ಜೊತೆ ಗೆಳತಿಯರಾದ ಮಂಗಳೂರಿನ ಯುವತಿಯರು ತೆರಳಿದ್ದರು.

ಈ ವಿಭಿನ್ನ ಕೋಮಿನ ಗುಂಪನ್ನು ಗಮನಿಸಿದ ಸ್ಥಳೀಯರು ಇವರನ್ನು ಪ್ರಶ್ನಿಸಿದ್ದಾರೆ. ಬಳಿಕ ಭಿನ್ನ ಕೋಮಿನ ಜೋಡಿಗಳು ಎಂದು ಖಚಿತಪಡಿಸಿಕೊಂಡ ಸ್ಥಳೀಯರು ಯುವಕರಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಡಿಕೇರಿಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಇವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *