Ad Widget .

ಬ್ಲೌಸ್ ಲೆಸ್ ಫೋಟೋ ಶೂಟ್ ಮಾಡಿಕೊಂಡ ಮಲೆಯಾಳಂ ನಟಿ| ವಿವಾದಕ್ಕೆ ಕಾರಣವಾಯ್ತು ಆಕೆಯ ಹಸಿಬಿಸಿ ದೇಹಸೌಂದರ್ಯ

ಸಮಗ್ರ ನ್ಯೂಸ್: ಮಲೆಯಾಳಂ‌ ಚಿತ್ರರಂಗ ಕೊಂಚ ಮಟ್ಟಿಗೆ ಸಭ್ಯತೆಯನ್ನು ಕಾಯ್ದುಕೊಂಡಿದೆ. ಆದರೆ ಇತ್ತೀಚೆಗೆ ಕೆಲವೊಂದು ಜನರು ಪ್ರಚಾರಕ್ಕಾಗಿ ಆ ಸಭ್ಯತೆಗೆ ಎಳ್ಳು ನೀರು ಬಿಡಲು ಕಾರಣರಾಗಿದ್ದಾರೆ. ಇದೀಗ ಇಂತಹದ್ದೊಂದು ವಿವಾದಾತ್ಮಕ ವಿಚಾರಕ್ಕೆ ನಟಿಯೊಬ್ಬರ ಫೋಟೋ ಶೂಟ್ ಆಹಾರವಾಗಿದೆ.

Ad Widget . Ad Widget .

ಜಾನಕಿ ಸುಧೀರ್ ಮಲಯಾಳಂ ಬಿಗ್ ಬಾಸ್ ನಾಲ್ಕನೇ ಸೀಸನ್‌ನಲ್ಲಿ ಸ್ಪರ್ಧಿಯಾದಾಗಿನಿಂದ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಒಂದು ವಾರ ಮಾತ್ರ ಕಳೆಯಲು ಸಾಧ್ಯವಾಗಿದ್ದರೂ, ಜಾನಕಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಜಾನಕಿ ಅವರು ಬ್ಲೌಸ್ ಬದಲಿಗೆ ಚಿನ್ನದ ಆಭರಣಗಳಿಂದ ತಮ್ಮ ದೇಹದ ಖಾಸಗಿ ಭಾಗವನ್ನು ಮುಚ್ಚಿ ತೆಗೆಸಿಕೊಂಡಿರುವ ಫೋಟೋಗಳು ಭಾರೀ ವೈರಲ್ ಆಗಿದೆ.

Ad Widget . Ad Widget .

ಜಾನಕಿ ಅಭಿಮಾನಿಗಳು ಇದು ವಿಭಿನ್ನ ಫೋಟೋ ಎಂದು ಲೈಕ್ ಕೊಟ್ಟರೆ, ಈ ಫೋಟೋಗಳು ಹಲವರ ಕೆಂಗಣ್ಣಿಗೆ ಗುರಿಯಾಗಿವೆ. ಜಾನಕಿಯ ಫೋಟೋಸ್ ಗೆ ಭಾರೀ ವಿರೋಧವೂ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆ ನಟಿಯ ಈ ಹಸಿಬಿಸಿ ದೇಹ ಸೌಂದರ್ಯದ ಫೋಟೋಗಳು ಜಾಲತಾಣಗಳಲ್ಲಿ ಸಕತ್ತಾಗಿ ಬಿಕರಿಯಾಗುತ್ತಿದೆ

Leave a Comment

Your email address will not be published. Required fields are marked *