Ad Widget .

ಬಹುಭಾಷಾ ನಟ ಆಸ್ಪತ್ರೆಗೆ ದಾಖಲು ! ಶೂಟಿಂಗ್ ವೇಳೆ ಅವಘಡ

ಖ್ಯಾತ ನಟ ನಾಸರ್​ ಅವರು ಬಹುಭಾಷೆಯಲ್ಲಿ ಫೇಮಸ್​ ಆಗಿದ್ದಾರೆ. ಸಿನಿಮಾ ಶೂಟಿಂಗ್​ ವೇಳೆ ನಾಸರ್​ ಪೆಟ್ಟು ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

Ad Widget . Ad Widget .

ತೆಲಂಗಾಣ ಪೊಲೀಸ್ ಅಕಾಡೆಮಿಯಲ್ಲಿ ನಾಸರ್​ ಅವರು ಸಿನಿಮಾ ಶೂಟಿಂಗ್​ ಮಾಡುತ್ತಿದ್ದರು. ಅವರ ಜೊತೆ ಸುಹಾಸಿನಿ ಮಣಿರತ್ನಂ, ಮೆಹ್ರೀನ್​ ಪೀರ್ಜಾದಾ, ಸಯ್ಯಾಜಿ ಶಿಂಧೆ ಮುಂತಾದ ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ನಾಸರ್​ ಅವರು ಮೆಟ್ಟಿಲುಗಳ ಮೇಲಿಂದ ಬಿದ್ದರು. ಅವರ ಕಣ್ಣಿನ ಭಾಗಕ್ಕೆ ಪೆಟ್ಟಾಯಿತು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಈ ಘಟನೆ ಬಗ್ಗೆ ಚಿತ್ರತಂಡದವರು ಅಥವಾ ನಾಸರ್​ ಕುಟುಂಬದವರು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಿದೆ.

Ad Widget . Ad Widget .

ಶಸ್ತ್ರ ಚಿಕಿತ್ಸೆ ಬಳಿಕ ನಾಸರ್​ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಶೀಘ್ರದಲ್ಲೇ ಹೆಲ್ತ್​ ಅಪ್​ಡೇಟ್​ ನೀಡಲಾಗುವುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ನಾಸರ್​ ಬ್ಯುಸಿ ಆಗಿದ್ದಾರೆ. ಪೋಷಕ ಪಾತ್ರಗಳನ್ನು ನಿಭಾಯಿಸುವ ಮೂಲಕ ಅವರು ಸಖತ್​ ಜನಪ್ರಿಯತೆ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *