Ad Widget .

“ಕೃಷ್ಣನ ನಾಮ ಜಪಂ ಮಂಗಲಂ”- ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಚರಣೆ ಮತ್ತು ಮಹತ್ವ

ಸಮಗ್ರ ವಿಶೇಷ: ನಾಡಿನೆಲ್ಲೆಡೆ ಶ್ರೀ ಕೃಷ್ಣ ಜನ್ಮಾಷ್ಠಮಿಯ ಸಂಭ್ರಮ ಸಡಗರ ಮನೆಮಾಡಿದೆ. ಭಗವಾನ್ ಶ್ರೀ ಕೃಷ್ಣನ ಜನ್ಮದಿನವನ್ನು ಹಿಂದೂ ಧರ್ಮದ ಜನರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಶ್ರೀ ಕೃಷ್ಣ ಜನ್ಮೋತ್ಸವವನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ವರಮಹಾಲಕ್ಷ್ಮೀ ಹಬ್ಬದ ನಂತರ ಬರುವ ಹಬ್ಬವೆಂದರೆ ಅದು ಕೃಷ್ಣ ಜನ್ಮಾಷ್ಠಮಿ.

Ad Widget . Ad Widget .

ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯು ಒಂದು. ಇದನ್ನು ಕೃಷ್ಣ ಜನ್ಮಾಷ್ಟಮಿ, ಗೋಕುಲಾಷ್ಟಮಿ, ಕೃಷ್ಣಾಷ್ಟಮಿ ಅಥವಾ ಶ್ರೀಜಯಂತಿ ಎಂದೂ ಕರೆಯಲಾಗುತ್ತದೆ, ಇದು ಕೃಷ್ಣನ ಜನ್ಮದಿನವನ್ನು ಸೂಚಿಸುತ್ತದೆ, ಅಂದರೆ ವಿಷ್ಣುವಿನ ಎಂಟನೇ ಅವತಾರ. ಈ ಹಬ್ಬವನ್ನು ಅದ್ಧೂರಿಯಾಗಿ ಎಲ್ಲ ಕಡೆ ಆಚರಣೆ ಮಾಡುತ್ತಾರೆ ಕೃಷ್ಣ ದೇವರು ಹುಟ್ಟಿದ ಮಥುರಾ ಮತ್ತು ವೃಂದಾವನ ನಗರಗಳಲ್ಲಿ ಇದನ್ನು ಇನ್ನೂ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ.

Ad Widget . Ad Widget .

ವಿವಿಧ ಹೆಸರುಗಳಿಂದ ಕರೆಯುವ ಗೋಪಿ ಲೋಲಾ, ನಂದ ಕಿಶೋರ, ಶ್ರೀಕೃಷ್ಣ ಹುಟ್ಟಿದ ದಿನದಂದು ಪುಟಾಣಿಗಳಿಂದ ಹಿಡಿದು ಮನೆಯ ಹಿರಿಯರವರೆಗೂ ಬಾಲ ಗೋಪಾಲನ ಜನ್ಮ ದಿನವನ್ನು ಆಚರಿಸುವ ಸಂಭ್ರಮ. ಪುಟಾಣಿ ಮಕ್ಕಳು ಗೋಪಾಲನ ಉಡುಗೆ ತೊಟ್ಟು ಬೆಣ್ಣೆ ಕೃಷ್ಣನ ರೂಪದಲ್ಲಿ ಕುಣಿಯುವ ದಿನ.

ಭಕ್ತರು ಉಪವಾಸವನ್ನು ಮಾಡುವ ಮೂಲಕ ಕೃಷ್ಣನನ್ನು ಪ್ರಾರ್ಥಿಸಿ ಈ ಮಂಗಳಕರ ಕಾರ್ಯದಲ್ಲಿ ಭಾಗವಾಗುತ್ತಾರೆ. ಭಾರತದಲ್ಲಿ ಕೃಷ್ಣ ಜನ್ಮಾಷ್ಟಮಿಯಂದು ಪ್ರತಿ ಮನೆಗಳಲ್ಲಿ ಹೂವುಗಳು, ದೀಪಗಳಿಂದ ಅಲಂಕರಿಸುತ್ತಾರೆ ಮತ್ತು ದೇವಾಲಯಗಳನ್ನು ಸಹ ಸುಂದರವಾಗಿ ಅಲಂಕರಿಸಲಾಗುತ್ತದೆ.

ಮಥುರಾ ಮತ್ತು ವೃಂದಾವನದ ದೇವಾಲಯಗಳಲ್ಲಿ ವರ್ಣರಂಜಿತ ಆಚರಣೆಗಳಿಗೆ ಸಾಕ್ಷಿಯಾಗುತ್ತವೆ, ಏಕೆಂದರೆ ಕೃಷ್ಣನು ಹುಟ್ಟಿದ ಪುಣ್ಯ ಸ್ಥಳ ಅದು. ಮಧ್ಯರಾತ್ರಿಯಲ್ಲಿ ಕೃಷ್ಣ ಜನಿಸಿದ ಕಾರಣ, ಶಿಶು ಕೃಷ್ಣನ ವಿಗ್ರಹವನ್ನು ಸ್ನಾನ ಮಾಡಿ ಆ ಸಮಯದಲ್ಲಿ ತೊಟ್ಟಿಲಲ್ಲಿ ಇರಿಸಲಾಗುತ್ತದೆ.ಮಹಾರಾಷ್ಟ್ರದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಮಣ್ಣಿನ ಮಡಕೆಗಳಲ್ಲಿ ಬೆಣ್ಣೆ ಮತ್ತು ಮೊಸರನ್ನು ಹಾಕಿ ಅದನ್ನು ಹೊಡೆಯುವ ಆಟವನ್ನು ಆಡುತ್ತಾರೆ. ಇದನ್ನು ದಹಿ ಹಂಡಿ ಆಚರಣೆ ಎಂದು ಕರೆಯಲಾಗುತ್ತದೆ, ಮಡಕೆಯನ್ನು ಮೇಲೆ ಕಟ್ಟಿ ಅದಕ್ಕೆ ನೆಲದಿಂದ ಎತ್ತರಕ್ಕೆ ಅಮಾನತುಗೊಳಿಸಲಾಗುತ್ತದೆ ಮತ್ತು ಜನರು ಅದನ್ನು ತಲುಪಲು ಮಾನವ ಅಲ್ಲಿರುವ ಯುವಕರು ಪಿರಮಿಡ್ ರಚಿಸಿ, ಮಡಿಕೆಯನ್ನು ಹೊಡೆಯುತ್ತಾರೆ. ಈ ರೀತಿಯ ಆಚರಣೆಯನ್ನು ನಮ್ಮ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಾಣಬಹುದು, ಈ ಆಚರಣೆಯನ್ನು ಮೊಸರು ಕುಡಿಕೆ ಎಂದು ಕರೆಯುತ್ತಾರೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಶ್ರೀ ಕೃಷ್ಣನನ್ನು ವಿಶೇಷವಾಗಿ ಪೂಜಿಸಿ ಸಂಭ್ರಮದಿಂದ ಆಚರಿಸುತ್ತಾರೆ. ಮೊಸರು ಕುಡಿಕೆ ಉತ್ಸವದಲ್ಲಿ ಜನರು ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಉಡುಪಿಯಲ್ಲಿ ಕೃಷ್ಣ ಮಠದಲ್ಲೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ ಮುಂದುವರೆದಿದೆ. ಅಷ್ಟಮಿಯ ಬಹುಮುಖ್ಯ ಧಾರ್ಮಿಕ ವಿಧಿ ಕೃಷ್ಣನಿಗೆ ಅರ್ಘ್ಯ ಪ್ರದಾನ. ಶ್ರೀ ಕೃಷ್ಣನ ಜನ್ಮಾಷ್ಟಮಿಗೆ ಉಪವಾಸದಲ್ಲಿದ್ದ ಪರ್ಯಾಯ ಶ್ರೀ ವಿದ್ಯಾದೀಶತೀರ್ಥ ಸ್ವಾಮೀಜಿ, ರಾತ್ರಿ 12:12ಕ್ಕೆ ಅರ್ಘ್ಯ ಸಲ್ಲಿಸುತ್ತಾರೆ.

ಕೃಷ್ಣ ಗುಡಿಯ ಪಕ್ಕದಲ್ಲಿದ್ದ ತುಳಸಿಗೆ ಶಂಖದ ಮೂಲಕ ನೀರು ಹಾಗೂ ಹಾಲು ಸಮರ್ಪಿಸುವ ಮೂಲಕ ಚಂದ್ರನಿಗೆ ಅರ್ಘ್ಯ ಸಮರ್ಪಿಸಿದರು. ಚಂದ್ರನಿಗೆ ಅರ್ಘ್ಯ ಸಮರ್ಪಿಸಿದ ಬಳಿಕ ಕೃಷ್ಣನ ಮೂರ್ತಿಗೆ ಹಾಲು, ನೀರಿನ ಮೂಲಕ ಅರ್ಘ್ಯ ಸಮರ್ಪಿಸಿ ಉಂಡೆ ಚಕ್ಕುಲಿ ನೈವೇದ್ಯ ಅರ್ಪಿಸಿ ಮಹಾಮಂಗಳಾರತಿ ಮಾಡುವ ಮೂಲಕ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ.

ಒಟ್ಟಿನಲ್ಲಿ ಪುರಾಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಬಗ್ಗೆ ಹಲವಾರು ಉಲ್ಲೇಖಗಳಿವೆ. ನಮ್ಮ ನಾಡಿನಲ್ಲೂ ವಿಶೇಷವಾಗಿ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಕರಾವಳಿ ಭಾಗದಲ್ಲಿ ವಿಶೇಷ ಆಹಾರ ಖಾದ್ಯಗಳನ್ನು ದೇವರಿಗೆ ಅರ್ಪಿಸಿ ನಂತರ ತಾವು ಸ್ವೀಕರಿಸಿ ಹಬ್ಬದ ವಾತಾವರಣದಲ್ಲಿ ತೊಡಗುವುದು ವಾಡಿಕೆ…

ಕಾವ್ಯ ರಾಧಾಕೃಷ್ಣ ಕೆದ್ಕಾರ್

Leave a Comment

Your email address will not be published. Required fields are marked *