Ad Widget .

ಸುಳ್ಯ: ದುರಸ್ಥಿಗೊಂಡ ಅರಮನೆಗಯ ತೂಗುಸೇತುವೆ; ಗ್ರಾಮಸ್ಥರಿಂದ ಅಭಿನಂದನೆ

ಸಮಗ್ರ ನ್ಯೂಸ್: ಮರ್ಕಂಜ ಮತ್ತು ಅರಂತೋಡು ಗ್ರಾಮಕ್ಕೆ ಸಂಬಂಧಪಟ್ಟ ಅರಮನೆಗಯ ಎಂಬ ಪರಿಶಿಷ್ಟ ಪಂಗಡದ 30 ಮನೆಗಳಿದ್ದು ಅಲ್ಲಿಯ ತೂಗು ಸೇತುವೆ ಸಂಪೂರ್ಣ ಶಿಥಿಲ ಗೊಂಡಿದ್ದರ ಬಗ್ಗೆ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಸ್ಥಳೀಯರು ದೂರು ನೀಡಿದ್ದರು.

Ad Widget . Ad Widget .

ಈ ವೇಳೆ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಮತ್ತು ಜಿಲ್ಲಾ ಸಂಚಾಲಕ ಪರಮೇಶ್ವರ ಕೆಮ್ಮಿಂಜೆ ಇವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ನಂತರ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿ ನಂತರ ಮಾನ್ಯ ತಹಶೀಲ್ದಾರರಾದ ಅನಿತ ಲಕ್ಷ್ಮಿ ಅವರಿಗೆ ಫೋನ್ ಕರೆಯ ಮೂಲಕ ಅರಮನೆಗಯ ತೂಗು ಸೇತುವೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿಕೊಡಬೇಕೆಂದು ಸಂಘಟನೆಯ ಮುಖಾಂತರ ಕೇಳಿಕೊಂಡಿದ್ದು, ತಹಶೀಲ್ದಾರರು ಅರಂತೋಡು ಗ್ರಾಮ ಪಂಚಾಯತ್ ಗೆ ತಕ್ಷಣ ಆ ತೂಗು ಸೇತುವೆಯನ್ನು ದುರಸ್ತಿ ಮಾಡಿಕೊಡಲು ಸೂಚಿಸಿದ್ದರು.

Ad Widget . Ad Widget .

ಈ ವೇಳೆ ಅರಂತೋಡು ಗ್ರಾಮ ಪಂಚಾಯತ್ ನವರು ಆ.16 ರಂದು ಅರಮನೆಗಯ ತೂಗು ಸೇತುವೆಯನ್ನು ದುರಸ್ತಿ ಮಾಡಿ ಕೊಟ್ಟಿದ್ದಾರೆ.

ದುರಸ್ತಿ ಮಾಡಿಕೊಟ್ಟಿದ ದಿನವೇ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ. ಸುಂದರ ಪಾಟಾಜೆ ಮತ್ತು ಜಿಲ್ಲಾ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಅರಮನೆ ಗಯದ ಸ್ಥಳೀಯರು ಸಂಘಟನೆಯ ಹೋರಾಟದಿಂದ ಈ ಸೇತುವೆ ಪಂಚಾಯತ್ ನವರು ನಿರ್ಮಿಸಿದ್ದಾರೆ. ಆದ ಕಾರಣ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ. ಸುಂದರ ಪಾಟಾಜೆಯವರಿಗೆ ಮತ್ತು ಜಿಲ್ಲಾ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆಯವರಿಗೆ ಸ್ಥಳೀಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Leave a Comment

Your email address will not be published. Required fields are marked *