Ad Widget .

ಸಾವರ್ಕರ್ ಬ್ಯಾನರ್ ಅಳವಡಿಕೆ ಹಿಂದೆ ಗಲಭೆ ಸೃಷ್ಟಿಸುವ ಪಿತೂರಿ- ಪಾಪ್ಯುಲರ್ ಫ್ರಂಟ್ ಆರೋಪ

ಸಮಗ್ರ ನ್ಯೂಸ್: ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದು ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಸಾವರ್ಕರ್ ಬ್ಯಾನರ್ ಅಳವಡಿಕೆಯ ಹಿಂದೆ ಗಲಭೆ ಸೃಷ್ಟಿಸುವ ಪಿತೂರಿ ಇದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಆರೋಪಿಸಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇತಿಹಾಸದ ಕಳಂಕಿತ ವ್ಯಕ್ತಿ ಸಾವರ್ಕರನ್ನು ಬಿಜೆಪಿ ವೈಭವೀಕರಿಸುತ್ತಾ ಬರುತ್ತಿದೆ. ಅದರೊಂದಿಗೆ ಈ ಬಾರಿ ಸರಕಾರ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಜಾಹೀರಾತಿನಲ್ಲಿ ನೆಹರೂರಂತಹ ಮೇಧಾವಿ ನಾಯಕರನ್ನು ಕೈಬಿಟ್ಟು ಸಾವರ್ಕರ್ ಗೆ ಪ್ರಮುಖ ಸ್ಥಾನ ನೀಡಲಾಯಿತು. ಇದಕ್ಕೆ ರಾಜ್ಯದ ಜನರಿಂದ ಬಹಳಷ್ಟು ಆಕ್ರೋಶವೂ ಕೇಳಿ ಬಂತು. ನಂತರ ಸಂಘ ಪರಿವಾರದ ಶಕ್ತಿಗಳು ರಾಜ್ಯದ ಹಲವು ಕಡೆಗಳಲ್ಲಿ ಸಾವರ್ಕರ್ ಬ್ಯಾನರ್ ಅಳವಡಿಸಿದಾಗ ತೀವ್ರ ವಿರೋಧದ ಕಾರಣ ಪೊಲೀಸರೇ ಅದನ್ನು ತೆರವುಗೊಳಿಸಬೇಕಾಯಿತು.

Ad Widget . Ad Widget . Ad Widget .

ಶಿವಮೊಗ್ಗದಲ್ಲೂ ಸಾವರ್ಕರ್ ಬ್ಯಾನರ್ ಅಳವಡಿಸಿ ಗಲಭೆ ಹರಡುವ ಪ್ರಯತ್ನ ನಡೆದಿದೆ. ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಶಿವಮೊಗ್ಗದಲ್ಲಿ ಬಿಜೆಪಿ-ಸಂಘ ಪರಿವಾರದ ನಾಯಕರು ಅಶಾಂತಿ ಹರಡಲು ಪ್ರಚೋದನೆ ನೀಡುತ್ತಾ ಬಂದಿದ್ದಾರೆ. ಹರ್ಷ ಎಂಬಾತನ ಕೊಲೆ ಘಟನೆಯ ವೇಳೆಯೂ ಈಶ್ವರಪ್ಪರಂತಹ ನಾಯಕರು ಕೋಮು ದ್ವೇಷ ಭಾಷಣ ಮಾಡಿ ಊರಿಗೇ ಬೆಂಕಿ ಹಚ್ಚಿದ್ದರು. ಇದೀಗ ಮತ್ತೇ ಸಾವರ್ಕರ್ ಬ್ಯಾನರ್ ನೆಪದಲ್ಲಿ ಅಶಾಂತಿ ಹರಡುವ ವ್ಯವಸ್ಥಿತ ಪ್ರಯತ್ನ ನಡೆದಿದೆ. ಅದರೊಂದಿಗೆ ಘಟನೆಯ ಹೊಣೆ ಪಾಪ್ಯುಲರ್ ಫ್ರಂಟ್ ಮೇಲೆ ಹೊರಿಸುತ್ತಿರುವ ಬಿಜೆಪಿಯ ವರ್ತನೆ ಬಾಲಿಶತನ.

ಈ ಹಿಂದೆ ಶಿವಮೊಗ್ಗದಲ್ಲಿ ಮಂಜುನಾಥ್ ಮತ್ತು ರೌಡಿಶೀಟರ್ ಹರ್ಷನ ಕೊಲೆ ನಡೆದಾಗ ಬಿಜೆಪಿ ಅದನ್ನು ಪಾಪ್ಯುಲರ್ ಫ್ರಂಟ್ ತಲೆಗೆ ಕಟ್ಟಿತ್ತು. ಮಂಜುನಾಥ್ ಕೌಟುಂಬಿಕ ಕಲಹದಿಂದ ಹತ್ಯೆಯಾಗಿದ್ದರೆ, ಹರ್ಷನದ್ದು ಗ್ಯಾಂಗ್ ವಾರ್ ಕೊಲೆ ಎಂದು ನಂತರ ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು. ಇದೀಗ ಶಿವಮೊಗ್ಗದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಅನ್ನು ಅನಗತ್ಯವಾಗಿ ಎಳೆದು ತರುವ ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರ ನಡೆ ಅಕ್ಷಮ್ಯ. ಬಿಜೆಪಿ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದಲ್ಲಿ ಕೋಮು ಧ್ರುವೀಕರಣ ನಡೆಸಲು ಪ್ರಯತ್ನಿಸುತ್ತಿದೆ. ಇದೀಗ ಬಿಜೆಪಿ ಘಟನೆಯ ನೈಜ ಆರೋಪಿಗಳ ರಕ್ಷಣೆಯಲ್ಲಿ ತೊಡಗಿದ್ದು, ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ನಡೆಸುತ್ತಿರುವುದು ಕಂಡು ಬರುತ್ತಿದೆ ಎಂದು ಅಗ್ನಾಡಿ ಹೇಳಿದ್ದಾರೆ.

Leave a Comment

Your email address will not be published. Required fields are marked *