ಸಮಗ್ರ ನ್ಯೂಸ್: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 10 ಕೋಟಿಗೂ ಹೆಚ್ಚು ರೈತರಿಗೆ ಸರ್ಕಾರವು ಮತ್ತೊಮ್ಮೆ ದೊಡ್ಡ ಘೋಷಣೆ ಮಾಡಿದೆ. ಇ-ಕೆವೈಸಿಯ ಕೊನೆಯ ದಿನಾಂಕವನ್ನು ಸರ್ಕಾರವು ಎರಡು ಬಾರಿ ವಿಸ್ತರಿಸಿದ ನಂತರವೂ , ರೈತರು ಇನ್ನೂ ಈ ಕೆಲಸವನ್ನು ಮಾಡಿರದಿದ್ದರೆ, ಈ ಸುದ್ದಿಯನ್ನು ಓದ್ಲೇಬೇಕು.
ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಇ-KYCಯ ಕೊನೆಯ ದಿನಾಂಕವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಿದೆ. ಮೊದಲು ಇದನ್ನು ಜುಲೈ 31ಕ್ಕೆ ನಿಗದಿ ಮಾಡಿತ್ತು. ಸರ್ಕಾರದ ಮೂಲಗಳ ಪ್ರಕಾರ, ಇದುವರೆಗೆ ಕೆಲವೇ ರೈತರು ಮಾತ್ರ ಇ-ಕೆವೈಸಿ ಮಾಡಿಸಿದ್ದಾರೆ. ಇದರಿಂದಾಗಿ ಸರ್ಕಾರ ಈ ದಿನಾಂಕವನ್ನು ಮತ್ತೆ ವಿಸ್ತರಿಸಿದೆ.
ಆಗಸ್ಟ್ 31 ರ ನಂತರ ವಿಸ್ತರಣೆಯಾಗುವುದು ಅನುಮಾನ. ಇ-ಕೆವೈಸಿ ಮಾಡಿಸದ ರೈತರಿಗೆ ಸರಕಾರದಿಂದ 12ನೇ ಕಂತಿನ ಹಣ ಸಿಗುವುದಿಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಮಾಡುವುದು ಅವಶ್ಯಕ
12 ನೇ ಕಂತಿನ ಹಣವು ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಬರುತ್ತದೆ. 12ನೇ ಕಂತು ಸೆಪ್ಟೆಂಬರ್ ಮೊದಲ ವಾರದಲ್ಲಿ ರೈತರ ಖಾತೆ ಸೇರುವ ನಿರೀಕ್ಷೆ ಇದೆ. ಇದಕ್ಕೂ ಮೊದಲು ಮೇ 31 ರಂದು ರೈತರ ಖಾತೆಗೆ ಪಿಎಂ ಕಿಸಾನ್ ನಿಧಿಯ 2 ಸಾವಿರ ರೂಪಾಯಿಗಳನ್ನು ವರ್ಗಾಯಿಸಲಾಗಿತ್ತು. ಯಾವ ರೈತರ ಖಾತೆಗೆ ಇನ್ನೂ 11ನೇ ಕಂತಿನ ಹಣ ಬಂದಿಲ್ಲವೋ ಅಂತಹ ರೈತರಿಗೆ ಈ ಬಾರಿ 12ನೇ ಕಂತಾಗಿ 4 ಸಾವಿರ ರೂ. ಸಿಗಲಿದೆ.
ಇ-ಕೆವೈಸಿ ಮಾಡೋದು ಹೇಗೆ ಗೊತ್ತಾ?
- ಮೊದಲು pmkisan.gov.in ನಲ್ಲಿ PM Kisan Yojana ವೆಬ್‌ಸೈಟ್‌ಗೆ ಹೋಗಿ.
- ಇಲ್ಲಿfarmers Cornerನಲ್ಲಿ ಇ-ಕೆವೈಸಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಈಗ ತೆರೆಯುವ ಹೊಸ ವೆಬ್ ಪುಟದಲ್ಲಿ, ಆಧಾರ್ ಸಂಖ್ಯೆಯನ್ನು ನಮೂದಿಸಿ ಸರ್ಚ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTPಯನ್ನು ಸಬ್ಮಿಟ್ ಮಾಡಿ.
- ಇಷ್ಟು ಮಾಡಿದರೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.