Ad Widget .

ಮಸೂದ್ ಹತ್ಯೆ ಪ್ರಕರಣ; ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ

ಸಮಗ್ರ ನ್ಯೂಸ್: ಗುಂಪಿನಿಂದ ಹಲ್ಲೆಗೊಳಗಾಗಿ ಸಾವಿಗೀಡಾದ ಬೆಳ್ಳಾರೆ ಠಾಣೆ ವ್ಯಾಪ್ತಿಯ ಕಳಂಜದ ಮಸೂದ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಎಲ್ಲಾ ಆರೋಪಿಗಳ ನ್ಯಾಯಾಂಗ ಕಸ್ಟಡಿಯನ್ನು ಆ. 29ರ ವರೆಗೆ ವಿಸ್ತರಿಸಿ ಸುಳ್ಯ ನಾಯಾಲಯ ಆದೇಶ ನೀಡಿದೆ.

Ad Widget . Ad Widget .

ಆರೋಪಿಗಳಾದ ಅಭಿಲಾಷ್‌, ಸುನಿಲ್‌ ಕೆ., ಸುಧೀರ್‌, ಶಿವಪ್ರಸಾದ್‌, ರಂಜಿತ್‌ ಬಿ., ಸದಾಶಿವ ಪೂಜಾರಿ, ರಂಜಿತ್‌, ಭಾಸ್ಕರ ಕೆ.ಎಂ. ಅವರ ಮೇಲೆ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಕಸ್ಟಡಿಯಲ್ಲಿದ್ದರು.

Ad Widget . Ad Widget .

ಮಂಗಳವಾರ ಕಸ್ಟಡಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮತ್ತೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

Leave a Comment

Your email address will not be published. Required fields are marked *