ಮಂಗಳೂರು; ವ್ಯಕ್ತಿಗೆ ರಾಡ್ ನಿಂದ ಹಲ್ಲೆ, ಸ್ಥಿತಿ ಗಂಭೀರ

ಮಂಗಳೂರು: ನಿನ್ನೆ ಸಂಜೆ ವ್ಯಕ್ತಿಯ ಮೇಲೆ ಇಬ್ಬರು ದುಷ್ಕರ್ಮಿಗಳು ರಾಡ್ ನಿಂದ ಹಲ್ಲೆ ನಡೆಸಿದ್ದು, ಹಲ್ಲೆಯಿಂದಾಗಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ನಡೆದಿದೆ.

Ad Widget ... ..

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಳಿಯ ಬೋಳೂರಿನಲ್ಲಿ ನಿನ್ನೆ ಸಂಜೆ ನವೀನ್ ಸಾಲ್ಯಾನ್ ಎಂಬಾತನ ಮೇಲೆ ದೇವದಾಸ್ ಬೋಳೂರು ಮತ್ತು ಪುತ್ರ ಸಾಯಿ ಕಿರಣ್ ಎಂಬವರು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Ad Widget

ಹಲ್ಲೆಗೊಳಗಾದ ನವೀನ್ ಅನ್ನು ಕೂಡಲೇ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ರಾಡ್ ನಿಂದ ಹಲ್ಲೆಗೊಳಗಾದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಸ್ಥಿತಿಯಲ್ಲಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಹಲ್ಲೆ ಮಾಡಿರುವ ದೇವದಾಸ್ ಹಾಗೂ ಸಾಯಿ ಕಿರಣ್ ಎಂಬವರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

Leave a Comment

Your email address will not be published. Required fields are marked *