Ad Widget .

ಬೆಂಗಳೂರಿಗೆ ಬಂದಿಳಿಯಲಿದೆ ವಿಶ್ವದ ಅತಿ ದೊಡ್ಡ ಪ್ರಯಾಣಿಕರ ವಿಮಾನ ! ಏನಿದರ ವಿಶೇಷತೆ ?

ವಿಶ್ವದ ಅತಿ ದೊಡ್ಡ ವಿಮಾನ ಏರ್‌ಬಸ್‌ ಎ-380 ಸೂಪರ್‌ಜಂಬೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರುವ ಅಕ್ಟೋಬರ್​ 30ರಂದು ಲ್ಯಾಂಡ್‌ ಆಗಲಿದೆ. ಇದರಿಂದ ಇನ್ನು ದುಬೈ – ಬೆಂಗಳೂರು ನಡುವೆ ನೇರ ವಿಮಾನಯಾನ ಸೇವೆ ಆರಂಭವಾದಂತಾಗಿದೆ.

Ad Widget . Ad Widget .

ಒಟ್ಟು 72.75 ಮೀಟರ್‌ ಉದ್ದ, 24.45 ಮೀಟರ್‌ ಎತ್ತರ ಹೊಂದಿರುವ ಈ ವಿಮಾನದಲ್ಲಿ ಒಂದು ಬಾರಿ ಗರಿಷ್ಠ 853 ಮಂದಿ ಪ್ರಯಾಣಿಸಬಹುದಾಗಿದೆ. ಒಂದು ಬಾರಿಗೆ 3 ಸಾವಿರ ಸೂಟ್‌ಕೇಸ್‌ಗಳನ್ನು ತೆಗದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ.

Ad Widget . Ad Widget .

ದುಬೈನಿಂದ ಟೇಕ್ ಆಫ್ ಆದ ಏರ್ ಬಸ್ ಆಕ್ಟೋಬರ್ 30 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಈ ಡಬ್ಬಲ್‌ ಡೆಕ್ಕರ್‌ ವಿಮಾನದಲ್ಲಿ ಮೂರು ದರ್ಜೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಎಕಾನಮಿ, ಬಿಸಿನೆಸ್‌, ಫಸ್ಟ್‌ ಕ್ಲಾಸ್‌ ಟಿಕೆಟ್‌ ಲಭ್ಯವಿದೆ.
EK568 ವಿಮಾನವು ಅಕ್ಟೋಬರ್ 30ರಂದು ದುಬೈಯಿಂದ ಸ್ಥಳೀಯ ಕಾಲಮಾನ ರಾತ್ರಿ 9.25ಕ್ಕೆ ಹೊರಟು ಮರುದಿನ ಮುಂಜಾನೆ 2.30ಕ್ಕೆ ಬೆಂಗಳೂರು ತಲುಪಲಿದೆ. ಹಿಂತಿರುಗುವ ವಿಮಾನ EK569 ಬೆಂಗಳೂರು ವಿಮಾನ ನಿಲ್ದಾಣದಿಂದ ಅಕ್ಟೋಬರ್ 31ಕ್ಕೆ ಮುಂಜಾನೆ 4.30ಕ್ಕೆ ಹೊರಟು ಬೆಳಗ್ಗೆ 7.10ಕ್ಕೆ ದುಬೈ ತಲುಪಲಿದೆ. A380ನಲ್ಲಿರುವ ಎಕಾನಮಿ ಕ್ಲಾಸ್ ನಲ್ಲಿರುವ ಸೀಟುಗಳು ದೊಡ್ಡದಾಗಿದ್ದು ಕಾಲಿಡುವ ಜಾಗವೂ ವಿಶಾಲವಾಗಿದೆ. ಬ್ಯುಸಿನೆಸ್ ಕ್ಲಾಸ್ ನಲ್ಲಿ ಫ್ಲಾಟ್ ಸೀಟ್ ಆಗಿದ್ದು ಫಸ್ಟ್ ಕ್ಲಾಸ್ ನಲ್ಲಿ ಪ್ರೈವೆಟ್ ಸೂಟ್ಸ್ ಮತ್ತು ಶವರ್ ಸ್ಪಾ ಇದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

A380 ಪೂರ್ಣ-ಉದ್ದದ ಡಬಲ್-ಡೆಕ್ಕರ್ ವಿಮಾನವಾಗಿದ್ದು, 500ಕ್ಕೂ ಹೆಚ್ಚು ಆಸನ ಸಾಮರ್ಥ್ಯವನ್ನ ಹೊಂದಿದೆ. ದೆಹಲಿ ಮತ್ತು ಮುಂಬೈ ನಂತರ ಜಂಬೋ ಜೆಟ್ ಪಡೆದ ಮೂರನೇ ಭಾರತೀಯ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ. ಎಮಿರೇಟ್ಸ್ ಏರ್ಲೈನ್ಸ್‌ಗೆ, ಇದು ಎ380 ಅನ್ನು ದೈನಂದಿನ ಸೇವೆಯಾಗಿ ನಿಯೋಜಿಸುವ ಎರಡನೇ ಭಾರತೀಯ ನಗರವಾಗಿದೆ. 2014ರಿಂದ ವಿಮಾನಯಾನ ಸಂಸ್ಥೆ ಮುಂಬೈ-ದುಬೈ ಮಾರ್ಗದಲ್ಲಿ ಎ380 ಹಾರಿಸುತ್ತಿದೆ.

Leave a Comment

Your email address will not be published. Required fields are marked *