Ad Widget .

ಮಡಿಕೇರಿ: ಬಾಡಿಗೆ ಮನೆ ಸಿಗದಿರುವುದಕ್ಕೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಮಂಗಳಮುಖಿ

ಸಮಗ್ರ ನ್ಯೂಸ್: ಬಾಡಿಗೆ ಮನೆ ಸಿಗದಿರುವುದಕ್ಕೆ ನೊಂದ ಮಂಗಳಮುಖಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನಗೆ ಯಾರೂ ಬಾಡಿಗೆ ಮನೆ ಕೊಡುತ್ತಿಲ್ಲ. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಕೊಡಗು ಜಿಲ್ಲಾಧಿಕಾರಿಗೆ ಮಂಗಳಮುಖಿ ಮನವಿ ಮಾಡಿದ್ದಾರೆ.

Ad Widget . Ad Widget .

ವಿಡಿಯೋ ಮೂಲಕ ತಮ್ಮ ಸಮಸ್ಯೆ ಹೇಳಿಕೊಂಡಿರುವ ಮಂಗಳಮುಖಿ, ನನಗೆ ಮನೆ ಬಾಡಿಗೆ ಕೊಡಲು ನಿರಾಕರಿಸಲಾಗುತ್ತಿದೆ. ಮನೆ ಖಾಲಿ ಇದ್ದರೂ ಕೂಡ ಇಲ್ಲವೆಂದು ಹೇಳಲಾಗುತ್ತಿದೆ. ಹಲವು ಬಾರಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಲಾಡ್ಜ್ ಗಳಲ್ಲಿ ದುಬಾರಿ ಹಣ ಕೊಡಬೇಕು. ಖರ್ಚು, ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *