Ad Widget .

ವೋಟಿ ಗಾಗಿ ಸಿದ್ದರಾಮಯ್ಯರಿಂದ ಸಾವರ್ಕರ್ ಅವಹೇಳನ – ಆರಗ ಜ್ಞಾನೇಂದ್ರ ಕಿಡಿ

ಸಮಗ್ರ ನ್ಯೂಸ್: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ವೋಟಿಗಾಗಿ ಓಲೈಕೆ ಮಾಡಿ ವಿ.ಡಿ. ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಸಾವರ್ಕರ್​​ ಅವರು ಬ್ರಿಟಿಷರ ಬೂಟು ನೆಕ್ಕಿದ್ರು ಎಂಬ ಹೇಳಿಕೆ ಒಂದು ಸಮುದಾಯವನ್ನು ಎತ್ತಿಕಟ್ಟಿದೆ. ಚುನಾವಣಾ ವರ್ಷ ಆಗಿರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸಾವರ್ಕರ್​​ ಓರ್ವ ಸ್ವಾತಂತ್ರ್ಯ ಹೋರಾಟಗಾರ, 13 ವರ್ಷ ಅವರು ಕರಿನೀರಿನ ಶಿಕ್ಷೆ ಅನುಭವಿಸಿದ್ದರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Ad Widget . Ad Widget .

ಶಿವಮೊಗ್ಗ ನಗರದಲ್ಲಿಂದು ವೀರ ಸಾವರ್ಕರ್​ ಫೋಟೋ ಅಳವಡಿಕೆ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಮುಸ್ಲಿಂ ಏರಿಯಾಗಳು ದೇಶದ ಹೊರಗೆ ಇದ್ದಾವೆಯೇ ಎಂದು ಒಂದು ಕ್ಷಣ ಗರಂ ಆದರು.

Ad Widget . Ad Widget .

ಸಿದ್ದರಾಮಯ್ಯನವರು ಹೀಗೆ ಮಾಡಿಯೇ ಅವರ ಆಳ್ವಿಕೆಯಲ್ಲಿ ಒಂದು ಸಮುದಾಯವನ್ನು ಎತ್ತಿ ಕಟ್ಟಿದ್ದಾರೆ. ಸಾವರ್ಕರ್​​ ಫೋಟೋವನ್ನು ಈ ದೇಶದಲ್ಲಿ ಹಾಕಬಾರದಾ? ಅವರ ಫೋಟೋವನ್ನು ಹಾಕುವುದನ್ನು ನಿಷೇಧ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು.

Leave a Comment

Your email address will not be published. Required fields are marked *