Ad Widget .

ಸ್ವಾತಂತ್ರ್ಯದ ಶುಭಕೋರಿದ ಡೇವಿಡ್ ವಾರ್ನರ್| ಇವರಿಗೊಂದು ಆಧಾರ್ ಕೊಡಿ ಎಂದ ನೆಟ್ಟಿಗರು

ಸಮಗ್ರ ನ್ಯೂಸ್: ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಸ್ವಾತಂತ್ರ್ಯದ ಅಮೃತೋತ್ಸವವನ್ನು ಆಚರಿಸಲಾಗುತ್ತಿದೆ.

Ad Widget . Ad Widget .

ಈ ಸಂಭ್ರಮದಲ್ಲಿ ಕ್ರಿಕೆಟಿಗರೂ ಪಾಲ್ಗೊಂಡು ಅಭಿಮಾನಿಗಳಿಗೆ ಶುಭಾಶಯ ಕೋರುತ್ತಿದ್ದಾರೆ. ವಿಶೇಷ ಎಂದರೆ ವಿದೇಶಿ ಕ್ರಿಕೆಟಿಗರೂ ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರುವ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಭಾರತೀಯರಿಗೆ 75ನೇ ಸ್ವಾತಂತ್ರ್ಯ ಸಂಭ್ರಮಕ್ಕೆ ಶುಭಕೋರುವ ಮೂಲಕ ಎಲ್ಲರ ಮನಗೆದ್ದಿದ್ದಾರೆ.

Ad Widget . Ad Widget .

ವಿಶೇಷ ಎಂದರೆ ಸದಾ ಭಾರತೀಯರಿಗೆ ಶುಭ ಹಾರೈಸುವ ಹಾಗೂ ಭಾರತೀಯ ಚಿತ್ರರಂಗದ ಕ್ರೇಜ್ ಬೆಳೆಸಿಕೊಂಡಿರುವ ವಾರ್ನರ್​ಗೂ ಒಂದು ಆಧಾರ್ ಕಾರ್ಡ್ ನೀಡಬೇಕೆಂದು ಕೆಲ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಕೇವಲ ಐಪಿಎಲ್​ ಮೂಲಕ ಹಣಗಳಿಸಿ ಹೋಗುವ ಆಟಗಾರರ ನಡುವೆ ವಾರ್ನರ್ ವಿಶೇಷ ವ್ಯಕ್ತಿ. ಡೇವಿಡ್ ವಾರ್ನರ್​ಗೂ ಒಂದು ಆಧಾರ್ ಕಾರ್ಡ್ ನೀಡಿ. ಈ ಮೂಲಕ ಭಾರತೀಯ ಆಧಾರ್ ಕಾರ್ಡ್ ಹೊಂದಿದ್ದ ವಿದೇಶಿ ಆಟಗಾರ ಎಂದು ಪರಿಗಣಿಸಿ ಎಂದು ಹಲವರು ಡೇವಿಡ್ ವಾರ್ನರ್​ಗೆ ಭಾರತದ ಮೇಲಿನ ಪ್ರೀತಿಯನ್ನು ಕೊಂಡಾಡಿದ್ದಾರೆ.

Leave a Comment

Your email address will not be published. Required fields are marked *