Ad Widget .

ಗುಂಡ್ಯ: ಜೈಲಿನಿಂದ ಬಿಡುಗಡೆಯಾಗುತ್ತಲೇ ಬೈಕ್ ಕದ್ದೊಯ್ದು ಜೈಲುಪಾಲಾದ ಕಳ್ಳ!!

ಸಮಗ್ರ ನ್ಯೂಸ್: ಜೈಲಿನಿಂದ ಬಿಡುಗಡೆಯಾಗುತ್ತಲ್ಲೇ ಬೈಕ್‌ ಕಳ್ಳತನ ಮಾಡಿದ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಗುಂಡ್ಯದಲ್ಲಿ ನಡೆದಿದೆ.

Ad Widget . Ad Widget .

ಕಣ್ಣೂರು ಜೈಲಿನಿಂದ ನಿನ್ನೆ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಹಾಗೇ ಬಿಡುಗಡೆಯಾದವನು ಮಂಗಳೂರಿನಿಂದ ಬೈಕೊಂದನ್ನು ಕದ್ದು ಅದರಲ್ಲೇ ಬೆಂಗಳೂರು ಮಾರ್ಗವಾಗಿ ತೆರಳುತ್ತಿದ್ದ. ಹೀಗೆ ಹೋಗುತ್ತಿದ್ದಾಗ ಎಂಜಿರ ಮಲ್ನಾಡ್ ಡಾಬಾದ ಸಮೀಪ ಇರುವ ಪಿ.ಜಿ ಸ್ಟೋರ್‌ ಬಳಿ ಬೈಕ್ ನ ಪೆಟ್ರೋಲ್ ಖಾಲಿಯಾಗಿದೆ. ಪೆಟ್ರೋಲ್‌ ಹಾಕಿಸಿಕೊಳ್ಳಲು ದುಡ್ಡು ಇಲ್ಲದೇ ಅಲ್ಲಿಂದ ಮುಂದಕ್ಕೆ ತೆರಳಲು ಪಿ.ಸಿ ಸ್ಟೋರ್ ಬಳಿ ದಿನಸಿ ಸಾಮಾನು ಖರೀದಿಸಲು ತೆರಳಿದ ನೆಲ್ಯಾಡಿಯ ಪದವಿ ಕಾಲೇಜೊಂದರ ಉಪನ್ಯಾಸಕಿಯ ಸ್ಕೂಟಿಯನ್ನು ಕದ್ದಿದ್ದಾನೆ.

Ad Widget . Ad Widget .

ಕಳ್ಳತನ ಗಮನಕ್ಕೆ ಬರುತ್ತಿದ್ದಂತೆ, ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ನಿವಾಸಿಗಳು ಪರಿಶ್ರಮದಿಂದ ಕಳ್ಳನನ್ನು ಗುಂಡ್ಯ ಚೆಕ್‌ ಪೋಸ್ಟ್ ಬಳಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂಲತಃ ಎಂಜಿರ ಪ್ರದೇಶವು ಧರ್ಮಸ್ಥಳ ಪೋಲಿಸ್ ಠಾಣಾ ವ್ಯಾಪ್ತಿಗೆ ಒಳಪಡುವುದರಿಂದ ಆರೋಪಿಯನ್ನು ಧರ್ಮಸ್ಥಳ ಪೋಲಿಸ್ ಠಾಣೆಗೆ ಉಪ್ಪಿನಂಗಡಿ ಪೋಲಿಸರು ಕರೆದ್ಯೊಯ್ದಿದ್ದಾರೆ. ಆತ ಕ್ಷಣಕ್ಕೊಂದು ಹೆಸರು ಹೇಳುತ್ತಿದ್ದರಿಂದ ಆತನ ನಿಜವಾದ ಹೆಸರು ತಿಳಿದುಬಂದಿಲ್ಲ.

Leave a Comment

Your email address will not be published. Required fields are marked *