Ad Widget .

ಚಲನಚಿತ್ರ ವಿಮರ್ಶಕ ಕೌಶಿಕ್ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ಕಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ವಿಮರ್ಶಕ ಮತ್ತು ಟ್ರ್ಯಾಕರ್ ಕೌಶಿಕ್ ಹೃದಯಾಘಾತದಿಂದ ನಿಧನರಾಗಿದ್ದಾರೆ. 36ವರ್ಷಕ್ಕೇ ಕೌಶಿಕ್ ಮರಣ ಕಾಲಿವುಡ್‌ನಲ್ಲಿ ತೀವ್ರ ವಿಷಾದವನ್ನುಂಟುಮಾಡಿದೆ. ಕೌಶಿಕ್ ಸಾವಿನ ಬಗ್ಗೆ ಸಹ ವಿಮರ್ಶಕರು ಮತ್ತು ಚಿತ್ರರಂಗದ ಗಣ್ಯರು ತೀವ್ರ ಆಘಾತ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ.

Ad Widget . Ad Widget .

ಕೌಶಿಕ್ ಅವರ ನಿಧನದ ಸುದ್ದಿಯು ಹೊಸ ಚಲನಚಿತ್ರಗಳ ವಿಮರ್ಶೆಗಾಗಿ ಅವರನ್ನು ಬಹಳ ಕಾಲದಿಂದ ಅನುಸರಿಸುತ್ತಿದ್ದ ಟ್ವಿಟರ್ ಬಳಕೆದಾರರಿಗೆ ಆಘಾತವಾಗಿದೆ. “ಸೀತಾರಾಮಂ” ಚಿತ್ರಕ್ಕೆ ಸಂಬಂಧಿಸಿದಂತೆ 7 ಗಂಟೆಗಳ ಹಿಂದೆ ಟ್ವೀಟ್ ಅನ್ನು ಸಹ ಅಪ್ಲೋಡ್ ಮಾಡಿದ್ದಾರೆ.

Ad Widget . Ad Widget .

ಕೌಶಿಕ್ ಫಿಲ್ಮ್ ಎಂಟರ್ಟೈನ್ಮೆಂಟ್ ಟ್ರ್ಯಾಕರ್, ಇನ್ಫ್ಲುಯೆನ್ಸರ್, ಯೂಟ್ಯೂಬ್ ವಿಡಿಯೋ ಜಾಕಿ, ಫಿಲ್ಮ್ ವಿಮರ್ಶಕ, ಕ್ರಿಕೆಟ್ ಮತ್ತು ಟೆನಿಸ್ ಬಫ್ ಎಂದು ಗುರುತಿಸಲ್ಪಟ್ಟಿದ್ದಾರೆ. ಮೈಕ್ರೋ ಬ್ಲಾಗಿಂಗ್ ಸೋಶಿಯಲ್ ಮೀಡಿಯಾ ಸೈಟ್ 4 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಕೌಶಿಕ್ ನಿಧನಕ್ಕೆ ನಟ ದುಲ್ಕರ್‌, ವಿಜಯದೇವರಕೊಂಡ, ಸಹ ಚಿತ್ರ ಟ್ರ್ಯಾಕರ್‌ಗಳು, ಥಿಯೇಟರ್ ಮಾಲೀಕರು, ಗಣ್ಯರು ಮತ್ತು ಚಲನಚಿತ್ರ ವಿಮರ್ಶಕರು ಸಂತಾಪ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *