Ad Widget .

ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿಬಿದ್ದು, ಸುಳ್ಯ ಮೂಲದ ಟೆಕ್ಕಿ ಸಾವು

ಸಮಗ್ರ ನ್ಯೂಸ್: ವಾಸಿಸುತ್ತಿದ್ದ ಕಟ್ಟಡದ ಎರಡನೇ ಮಹಡಿಯ ಟೆರೇಸ್‍ನಲ್ಲಿ ರಾಷ್ಟ್ರಧ್ವಜ ಹಾರಿಸುವ ವೇಳೆ ಜಾರಿ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮೃತಪಟ್ಟ ಘಟನೆ ನಗರದ ಹೆಣ್ಣೂರಿನಲ್ಲಿ ರವಿವಾರ ನಡೆದಿದೆ.

Ad Widget . Ad Widget .

ಮೂಲತಃ ಸುಳ್ಯದವರಾದ ಅರ್ಚಕ ನಾರಾಯಣ ಭಟ್ ಎಂಬವರ ಪುತ್ರ ವಿಶ್ವಾಸ್ ಕುಮಾರ್ (33) ಮೃತಪಟ್ಟ ಟೆಕ್ಕಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿಶ್ವಾಸ್, ಹೆಣ್ಣೂರು ಎಚ್‍ಬಿಆರ್ ಲೇಔಟ್ 5ನೇ ಬ್ಲಾಕ್‍ನಲ್ಲಿ ತಮ್ಮ ಕಟ್ಟಡದ ಟೆರೇಸ್‍ಗೆ ರಾಷ್ಟ್ರಧ್ವಜ ಹಾರಿಸುವ ಸಲುವಾಗಿ ಹೋಗಿದ್ದರು.

Ad Widget . Ad Widget .

ಎರಡು ಮಹಡಿಯ ಕಟ್ಟಡದ ನೆಲಮಹಡಿಯಲ್ಲಿ ಇವರು ವಾಸವಿದ್ದರು. ಪತ್ನಿ ವೈಶಾಲಿ ಹಾಗೂ ಎರಡು ವರ್ಷದ ಮಗಳು ಮತ್ತು ಪೋಷಕರ ಜತೆ ವಿಶ್ವಾಸ್ ವಾಸವಿದ್ದರು.

ರವಿವಾರ ಮಧ್ಯಾಹ್ನ 1.45ರ ಸುಮಾರಿಗೆ ವಿಶ್ವಾಸ್ ಟೆರೇಸ್‍ನ ಅಡ್ಡಗೋಡೆಯನ್ನು ಏರಿ ಧ್ವಜ ಹಾರಿಸುವ ಸಲುವಾಗಿ ಕೋಲು ಕಟ್ಟಲು ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.

“ನಾರಾಯಣ ಭಟ್ ಹಾಗೂ ವೈಶಾಲಿ ತಕ್ಷಣ ವಿಶ್ವಾಸ್ ಅವರನ್ನು ಆಸ್ಪತ್ರೆಗೆ ಸಾರಿಸಿದರೂ, ತಲೆಗೆ ಆಗಿದ್ದ ಗಂಭೀರ ಗಾಯದಿಂದಾಗಿ ಅವರು ಮೃತಪಟ್ಟರು” ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *