ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ದೇಶದಾದ್ಯಂತ ಮನೆ ಮನೆ ತ್ರಿವರ್ಣ ಧ್ವಜ ಹಾರಿಸಿ, ಜನತೆ ಸಂಭ್ರಮಿಸಿದ್ದಾರೆ. ದೇಶದ ಜನತೆಗೆ ತ್ರಿವರ್ಣ ಧ್ವಜಾರೋಹಣದ ಮಹತ್ವ ತಿಳಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಯಶಸ್ವಿಯಾಗಿದೆ.
ಹರ್ ಘರ್ ತಿರಂಗಾ ಹೆಸರಿನ ಅಭಿಯಾನವನ್ನು ಆಗಸ್ಟ್ 13 ರಿಂದ 15ರ ತನಕ ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಾರಿಗೊಳಿಸಲಾಗಿತ್ತು. ದೇಶದ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವವನ್ನು ಗುರುತಿಸಲು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿತ್ತು. ಭಾರತೀಯ ಜನರು ರಾಷ್ಟ್ರಧ್ವಜವನ್ನು ಮನೆ ತಂದು ‘ಹರ್ ಘರ್ ತಿರಂಗ’ ಅಭಿಯಾನದ ಭಾಗವಾಗಲು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಹರ್ ಘರ್ ತಿರಂಗಾ ಪ್ರಮಾಣ ಪತ್ರ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?
• ಹರ್ ಘರ್ ತಿರಂಗಾ ವೆಬ್ ತಾಣಕ್ಕೆ ಭೇಟಿ ಕೊಡಿ
• ವೆಬ್ ತಾಣದ ಮುಖಪುಟದಲ್ಲಿ ಕಾಣುವ Pin A Flag ಕ್ಲಿಕ್ ಮಾಡಿ
• ಇದಕ್ಕೂ ಮುನ್ನ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
• ನಂತರ Next ಕ್ಲಿಕ್ ಮಾಡಿ
• ನಿಮ್ಮ location ತಿಳಿಯಲು ಅನುಮತಿ ಕೋರಲಾಗುತ್ತದೆ. ಮ್ಯಾಪ್ ನೋಡಿ ನೀವು ನೆಲೆಸಿದ ಸ್ಥಳವನ್ನು ಸರಿಯಾಗಿ ಮಾರ್ಕ್ ಮಾಡಿ.
• ಬಾವುಟವನ್ನು ಪಿನ್ ಮಾಡಿ, ಪಾಪ್ ಅಪ್ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕೆ ಧನ್ಯವಾದ ಎಂಬ ಸಂದೇಶ ಬರಲಿದೆ.
• ಡೌನ್ ಲೋಡ್ ಕ್ಲಿಕ್ ಮಾಡಿ ಸೇವ್ ಮಾಡಿಕೊಳ್ಳಿ. ಇದು PNG ಮಾದರಿಯಲ್ಲಿರಲಿ.