Ad Widget .

ಕರ್ನಾಟಕದಲ್ಲಿ ಮತ್ತೊಂದು ಹೊಸ ಜಿಲ್ಲೆಯ ಉದಯ| ಶೀಘ್ರದಲ್ಲೇ ಜಿಲ್ಲಾಕೇಂದ್ರವಾಗಿ ದೇವನಹಳ್ಳಿ

ಸಮಗ್ರ ನ್ಯೂಸ್: ಇನ್ನೊಂದು ತಿಂಗಳೊಳಗೆ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

Ad Widget . Ad Widget .

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ದೇವನಹಳ್ಳಿಯು ನಾಡಪ್ರಭು ಕೆಂಪೇಗೌಡರು ಆಡಳಿತ ನಡೆಸಿದ ಪ್ರದೇಶವಾಗಿದೆ.

Ad Widget . Ad Widget .

ಕೇಂಪೇಗೌಡರ ಆಡಳಿತದ ನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿರುವುದು ಹೆಮ್ಮೆ ತಂದಿದ್ದು, ಇಂತಹ ದೇವನಹಳ್ಳಿ ಪ್ರದೇಶವನ್ನು ಜಿಲ್ಲಾ ಕೇಂದ್ರವಾಗಿಸಲು ಒಂದು ತಿಂಗಳೊಳಗೆ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ನಾವೆಲ್ಲರೂ ರಾಷ್ಟ್ರಧ್ವಜವನ್ನು ಮನೆಯ ಮೇಲೆ ಹಾರಿಸಿದ್ದೇವೆ. ಈಮೂಲಕ ನಾವು ರಾಷ್ಟ್ರಧಜ್ವಕ್ಕೆ ತೋರುವ ಗೌರವ ಒಂದು ದಿನಕ್ಕೆ ಸಿಮೀತವಾಗದೇ ಇಡೀ ವರ್ಷ ಧ್ವಜಕ್ಕೆ ಗೌರವ ನೀಡಬೇಕು. ರಾಷ್ಟ್ರವನ್ನು ಪೀತಿಸಬೇಕು ಎಂದರು.

Leave a Comment

Your email address will not be published. Required fields are marked *