Ad Widget .

‘ಹಲೋ’ ಬದಲಿಗೆ ಸರ್ಕಾರಿ ಅಧಿಕಾರಿಗಳು ‘ವಂದೇ ಮಾತರಂ’ ಹೇಳಿ| ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಹೊಸ ಆದೇಶ ನೀಡಿದ “ಮಹಾ” ಸರ್ಕಾರ

ಸಮಗ್ರ ನ್ಯೂಸ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ವೇಳೆ, ಇಂಗ್ಲಿಷರ ಹಲೋ ಯಾಕೆ? ಅದರ ಬದಲು ಇನ್ಮುಂದೆ ಹಲೋ ಬದಲು ವಂದೇ ಮಾತರಂ ಹೇಳಿ..

Ad Widget . Ad Widget .

ಹೀಗೆಂದು ಮಹಾರಾಷ್ಟ್ರ ಸರ್ಕಾರ ಸೂಚನೆ ನೀಡಿದೆ. ನಿನ್ನೆಯಷ್ಟೇ ಮಹಾರಾಷ್ಟ್ರ ಸರ್ಕಾರದ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಸಾಂಸ್ಕೃತಿಕ ವ್ಯವಹಾರಗಳ ಸಚಿವರಾಗಿ ನೇಮಕಗೊಂಡ ಸುಧೀರ್ ಮುಂಗಂತಿವಾರ್ ಇಂಥದ್ದೊಂದು ಸೂಚನೆ ನೀಡಿದ್ದಾರೆ.

Ad Widget . Ad Widget .

ಮಹಾರಾಷ್ಟ್ರ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಕಚೇರಿಗಳಲ್ಲಿ ಫೋನ್ ಕರೆಗಳನ್ನು ತೆಗೆದುಕೊಳ್ಳುವಾಗ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎಂದು ಹೇಳಿ ಎಂದಿದ್ದಾರೆ. ಈ ಬಗ್ಗೆ ಆಗಸ್ಟ್ 18 ರೊಳಗೆ ಅಧಿಕೃತ ಸರ್ಕಾರಿ ಆದೇಶ ಬರಲಿದೆ ಎಂದು ಅವರು ಹೇಳಿದರು.

ಭಾನುವಾರ ಮಹಾರಾಷ್ಟ್ರದ ಸಚಿವ ಸಂಪುಟವನ್ನು ವಿಸ್ತರಣೆಯಾಗಿದೆ. ಮುಖ್ಯಮಂತ್ರಿಯಾದ 41 ದಿನಗಳ ನಂತರ ಮಂಗಳವಾರ ತಮ್ಮ ಇಬ್ಬರು ಸದಸ್ಯರ ಸಂಪುಟಕ್ಕೆ 18 ಮಂತ್ರಿಗಳನ್ನು ಸೇರಿಸಿಕೊಂಡಿದ್ದ ಶಿಂಧೆ, ಭಾನುವಾರ ಖಾತೆಗಳನ್ನು ಹಂಚಿಕೆ ಮಾಡಿದರು. ಉಪಮುಖ್ಯಮಂತ್ರಿಯಾದ ಮಾಜಿ ಸಿಎಂ ಬಿಜೆಪಿಯ ದೇವೇಂದ್ರ ಫಡ್ನವಿಸ್​ ಮಹತ್ವದ ಗೃಹ ಖಾತೆ ಪಡೆದಿರುವುದಲ್ಲದೆ ಪಕ್ಷದ ಇತರರಿಗೂ ಪ್ರಮುಖ ಖಾತೆಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಮೇಲುಗೈ ಪಡೆದಿದ್ದಾರೆ. ಶಿಂಧೆ ನಗರಾಭಿವೃದ್ಧಿ ಅಲ್ಲದೆ ಇತರ 11 ಖಾತೆಗಳನ್ನೂ ತಮ್ಮ ಬಳಿ ಇರಿಸಿಕೊಂಡಿದ್ದಾರೆ. ಪಡ್ನವಿಸ್​ ಅವರಿಗೆ ಇನ್ನೊಂದು ಮಹತ್ವದ ಖಾತೆಯಾದ ಹಣಕಾಸು ಹಾಗೂ ಯೋಜನಾ ಖಾತೆ ಮಾತ್ರವಲ್ಲದೆ ಕಾನೂನು ಮತ್ತು ನ್ಯಾಯಾಂಗ, ಜಲ ಸಂಪನ್ಮೂಲ, ವಸತಿ, ಇಂಧನ ಮತ್ತು ಶಿಷ್ಟಾಚಾರ ಖಾತೆಗಳನ್ನು ಕೂಡ ಹೆಚ್ಚುವರಿಯಾಗಿ ಕೊಡಲಾಗಿದೆ.

Leave a Comment

Your email address will not be published. Required fields are marked *