Ad Widget .

ಗುಡ್ ನ್ಯೂಸ್; ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ

ಸಮಗ್ರ ನ್ಯೂಸ್: ಉದ್ಯೋಗಾಕಾಂಕ್ಷಿಗಳಿಗೆ ಒಂದೊಳ್ಳೆ ಸುದ್ದಿ ಇಲ್ಲಿದೆ. ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ನನ್ನ ಶಾಲೆ ನನ್ನ ಕೊಡುಗೆ ಕಾರ್ಯಕ್ರಮಕ್ಕಾಗಿ ಸಮಾಲೋಚಕರ ಹುದ್ದೆ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ. ಸಮಾಲೋಚಕರು ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಬಹುದು.

Ad Widget . Ad Widget .

ಸಂಸ್ಥೆಯ ಹೆಸರು: ಸಾರ್ವಜನಿಕ ಶಿಕ್ಷಣ ಇಲಾಖೆ
ಹುದ್ದೆಯ ಹೆಸರು: ಸಮಾಲೋಚಕರು
ಹುದ್ದೆಗಳ ಸಂಖ್ಯೆ: ನಿಗದಿಪಡಿಸಿಲ್ಲ
ಉದ್ಯೋಗ ಸ್ಥಳ: ಕರ್ನಾಟಕದಾದ್ಯಂತ
ವೇತನ: ಮಾಸಿಕ ರೂ.60,000 – 75,000 ವರೆಗೆ,
ಶೈಕ್ಷಣಿಕ ಅರ್ಹತೆ: ಅರ್ಥಶಾಸ್ತ್ರ / ಸಮಾಜ ವಿಜ್ಞಾನ / ಅಭಿವೃದ್ಧಿ ಅಧ್ಯಯನ / ಸಮಾಜ ಕಾರ್ಯ / ಪಬ್ಲಿಕ್ ಪಾಲಿಸಿ ಅಥವಾ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಾಸ್ ಮಾಡಿರಬೇಕು.
ವಯಸ್ಸಿನ ಮಿತಿ: ನಿಗದಿಪಡಿಸಿಲ್ಲ
ವಯಸ್ಸಿನ ಸಡಿಲಿಕೆ: ಸರ್ಕಾರಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇದೆ.
ಅರ್ಜಿ ಸಲ್ಲಿಕೆ ವಿಧಾನ: ರೆಸ್ಯೂಮ್‌ ಜತೆಗೆ ಅರ್ಜಿ ಕವರ್ ಲೆಟರ್ ಅನ್ನು ಇಮೇಲ್ ಮಾಡಬೇಕು
ಇಮೇಲ್​ ವಿಳಾಸ: [email protected]

Ad Widget . Ad Widget .

ಆಯ್ಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ನಂತರ ಅವರಿಗೆ ಯಾವುದಾದರೂ ಒಂದು ಟಾಪಿಕ್ ನೀಡಲಿದ್ದು, ಅದರ ಕುರಿತು ಪ್ರೆಸೆಂಟೇಷನ್ ನೀಡಬೇಕು. ನಂತರ ಸಂದರ್ಶನ ನಡೆಸಿ, ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-08-2022 ರ ಸಂಜೆ 05-30.
ಅರ್ಜಿ ಸಲ್ಲಿಸಬೇಕಾದ ವಿಳಾಸ: [email protected] ಗೆ ಸಬ್ಜೆಕ್ಟ್‌ ಲೈನ್ – Application – Consultant – Private Sector Engagement, NSNK- ಎಂದು ಬರೆದು ಕಳುಹಿಸುವುದು.

ಇತರೆ ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ : 9448999422 (DPI), 9480518895 (SADPI), CPI Office.

ಅರ್ಜಿ ಸಲ್ಲಿಕೆ ಪ್ರಕ್ರಿಯೆ
ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ರೆಸ್ಯೂಮ್ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.

Leave a Comment

Your email address will not be published. Required fields are marked *