Ad Widget .

ದ್ವಾದಶ ರಾಶಿಗಳ ವಾರ ಭವಿಷ್ಯ

ಮೇಷ:
ಕಡೆಯ ಭಾಗದ ಶ್ರಾವಣವು ಕೃಷ್ಣ ಪದಲ್ಲಿ ನಡೆದು ಚಂದ್ರ ಬಲವು, ಗುರು ಬಲವು ಇಲ್ಲದೆ ಕಾರ್ಯಗಳಲ್ಲಿ ಆತಂಕ ತರುತ್ತದೆ. ಕೆಲಸಗಳಲ್ಲಿ ತೃಪ್ತಿ, ಸಂತೋಷ ನಿರೀಕ್ಷಿತ ಮಟ್ಟದಲ್ಲಿ ಕೊಡಲಾಗುವುದಿಲ್ಲ. ಗುರು ಪ್ರಾರ್ಥನೆಯೊಂದಿಗೆ ಗುರು ವಂದನೆ ಸಲ್ಲಿಸಿ. ಸಾಧ್ಯವಾದಲ್ಲಿ ದಂಪತಿ ಗಳಿಗೆ ಇಚ್ಛಾ ಭೋಜನ ಮಾಡಿಸಿದರೆ ಕಾರ್ಯಗಳಲ್ಲಿ ವಿಘ್ನಗಳು ನಿವಾರಣೆಯಾಗುತ್ತವೆ.

Ad Widget . Ad Widget .

ವೃಷಭ
ವೃಷಭ ರಾಶಿಯಲ್ಲಿ ಅಂಗಾರಕನು ಇದ್ದು, ರಾಶ್ಯಾಧಿಪತಿ ಶುಕ್ರನು ಕಟಕ ರಾಶಿಯಲ್ಲಿದ್ದಾನೆ. ರವಿ ಸಂಯುಕ್ತನಾಗಿದ್ದು ಅನನ್ಯವಾದ, ದೃಢವಾದ ಭಕ್ತಿಯನ್ನು ದೇವರಲ್ಲಿ ಇರಿಸಿ, ಸುಬ್ರಹ್ಮಣ್ಯನನ್ನು ಬಲವಾಗಿ ನಂಬಿದರೆ ಕೆಲಸಗಳು ಮುಂದೆ ಸಾಗುತ್ತವೆ. ವಿದ್ಯಾರಣ್ಯಪುರದ ದುರ್ಗೆಯನ್ನು ಸಂದರ್ಶಿಸಿ ಮುಂದೆ ಸಾಗಿ.

Ad Widget . Ad Widget .

ಮಿಥುನ
ರಾಶಿಗೆ 2ನೇ ಮನೆಯಲ್ಲಿ ಶುಕ್ರನು ಇದ್ದು, ರವಿಯು ಚಂದ್ರನ ಮನೆಯಲಿದ್ದು, ಕೆಲಸಗಳು ಸಾಗಲು ಬೇಕಾದ ತೇಜಸ್ಸು ಸಿಗದು. ಆದರೂ ಶುಕ್ರನು ಉಚ್ಛನಾಗಿ ವ್ಯವಹಾರದಲ್ಲಿ ಪ್ರಗತಿ, ಲಾಭ, ಕೀರ್ತಿ ಯಶಸ್ಸು ಕೊಡುವ ಸಮಯ. ಈ ಸಮಯ ಹಾಳು ಮಾಡದೆ ದೇವರು ಕೊಟ್ಟ ಭಾಗ್ಯ ಕಾಪಾಡಿಕೊಳ್ಳಲು ಮಹಾಲಕ್ಷ್ಮಿ ಅಷ್ಟೋತ್ತರ ಪಾರಾಯಣ ಮಾಡಿ.

ಕಟಕ
ಕಟಕ ರಾಶಿಯಲ್ಲಿ ಶುಕ್ರನು ರವಿಯೊಂದಿಗೆ ಬರಲಿದ್ದು, ಒಂಬತ್ತರ ಗುರುವು ನಿಮಗೆ ಆರೋಗ್ಯದಲ್ಲಿ ನವ ಚೈತನ್ಯ, ಉಲ್ಲಾಸ, ಅಗತ್ಯವಾದ ಶಾಂತಿ ನೀಡಿ ಸಂರಸುತ್ತಾನೆ. ನೀವು ದೈವಕ್ಕೆ ಏನು ಕೊಟ್ಟಿರೆಂದು ಯೋಚಿಸಿ. ಪಾರ್ವತಿಯ ಬೇಡಿಕೆಯಿಂದ ಶ್ರೀ ರಾಮಾಯಣವನ್ನು ಲೋಕಕ್ಕೆ ಕೊಟ್ಟ ಶಿವನು ಮನುಷ್ಯನು ಕೇಳಿದ್ದು ಕೊಡನೆ? ಸಂತೋಷದಿಂದ ಪೂಜಿಸಿ. ಅವನು ತೃಪ್ತನಾಗಿ ನೀವು ಕೇಳಿದಕ್ಕಿಂತ ಹೆಚ್ಚಿಗೆ ಕೊಟ್ಟು ಕಾಪಾಡುತ್ತಾನೆ.

ಸಿಂಹ
ಸೂರ್ಯನ ಮನೆಯಲ್ಲಿ ಬುಧನಿರುವುದು ಮಿತ್ರ ಕ್ಷೇತ್ರ. ನಿಮಗೆ ಬಂದ ಸಂಪತ್ತು ವ್ಯಯ ಮಾಡಲು ಶುಕ್ರನು ಇದ್ದಾನೆ. ಗುರು ಅಷ್ಟಮದಲ್ಲಿ ಇದ್ದರೂ ತೊಂದರೆ ನೀಡದೆ ಖರ್ಚನ್ನು ಕಡಿತ ಮಾಡುತ್ತಾನೆ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಈ ವಾರ ಕ್ಷೇಮ, ಶುಭಕರ.

ಕನ್ಯಾ
ರಾಶ್ಯಾಧಿಪತಿ ಬುಧ ದ್ವಾದಶದಲ್ಲಿ ಇದ್ದಾನೆ. ಸಪ್ತಮ ಗುರುವು ಸರ್ವಬಲ, ದೈವ ಬಲ, ಯೋಗ ಬಲ ಎಲ್ಲವನ್ನೂ ನೀಡಿದರೂ ಪಂಚಮ ಶನಿಯಿಂದ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಉನ್ಮತ್ತದಿಂದ ವರ್ತಿಸಿದರೆ ಕೊಡುವ ದೇವರು ಏನು ತಾನೆ ಮಾಡಬಲ್ಲ? ಕೆಲಸವನ್ನು ಉಪಾಯದಿಂದ ಸಾಧಿಸಿ. ವಿದ್ಯಾದೇವತೆ ಸರಸ್ವತಿಯನ್ನು ಅರ್ಚಿಸಿ, ಪೂಜಿಸಿ.

ತುಲಾ
ರಾಶ್ಯಾಧಿಪತಿ ಶುಕ್ರನು ದಶಮದಲ್ಲಿ ಇದ್ದು, ಏಕದಶದಲ್ಲಿ ಬುಧ ಇದ್ದಾನೆ. ವ್ಯಾಪಾರ ವ್ಯವಹಾರವು ಲಾಭಕ್ಕೆ ತಿರುಗಿ ಸಂತೋಷ ಕೊಡುವ ಕಾಲ. ಪಾತ್ರರಿಗೆ ದಾನ ಮಾಡಿ ಎಂಬ ಉಕ್ತಿಯನ್ನು ಇಟ್ಟುಕೊಂಡು ನೀವು ಏನು ಕೊಟ್ಟರೂ ಸ್ವೀಕರಿಸುವವರು ದ್ವೇಷ ಇಲ್ಲದ ದೇವತಾ ಸ್ವರೂಪಿಗಳಾಗಿರಬೇಕು. ಮೆಹಂದಿ ಗಿಡವು ಮಲ್ಲಿಗೆಯನ್ನು ನೀಡಲಾಗುತ್ತದೆಯೇ? ಆದ್ದರಿಂದ ನೀವು ಅತ್ಯಮೂಲ್ಯ ವಸ್ತು ನೀಡುವಾಗ ಯೋಚಿಸಿ. ನಿಮ್ಮನ್ನು ನೀವು ತಿದ್ದಿಕೊಂಡು ನಡೆಯಬೇಕು. ಕಳೆದ ವಾರ ವಿಘ್ನಗಳು ಬಂದಿವೆ. ವಿಘ್ನೇಶ್ವರನನ್ನು ಪೂಜಿಸಿ. ಅನಂತ ಪದ್ಮನಾಭ ವ್ರತ& ಕಥೆ ಪಠಿಸಿ.

ವೃಶ್ಚಿಕ
ನಾವು ಏನೇ ಮಾಡಿದರೂ ಕರ್ಮಕ್ಕೆ ತಕ್ಕಂತ ಫಲಗಳು ಬಂದೇ ಬರುತ್ತವೆ. ಒಂದು ಕಡೆಯಿಂದ ಆಂಗಾರಕನು, ಇನ್ನೊಂದು ಕಡೆಯಿಂದ ದಾರಿ ತಪ್ಪಿದ ಚೇಳನ್ನು ಜೇಬಿನಲ್ಲಿ ಇಟ್ಟುಕೊಂಡು ಮುಂದೆ ನಡೆಯಲು ಸಾಧ್ಯವೇ? ದೈವವನ್ನು ತನು ಮನದಲ್ಲಿ ಇರಿಸಿ. ನಿಮಗೆ ಅಧಿಕ ಲಾಭ, ಕಾರ್ಯಚಟುವಟಿಕೆಯಲ್ಲಿ ಅತ್ಯಂತ ಪ್ರಗತಿ ಕಂಡು ಆನಂದಪಡುವ ಕಾಲ. ಸುಬ್ರಹ್ಮಣ್ಯನನ್ನು ಪೂಜಿಸಿ. ಅವನ ತಂದೆ ಕಾಶಿ ವಿಶ್ವನಾಥನನ್ನು ಪೂಜಿಸಿ ಪ್ರಾರ್ಥಿಸಿ.

ಧನುಸ್ಸು
ರಾಮನು ಶಿವಧನಸ್ಸನ್ನು ಮುರಿಯದಿದ್ದರೆ ಸೀತೆ ಸಿಕ್ಕುತ್ತಿರಲಿಲ್ಲ. ಮನುಷ್ಯ ಅವತಾರದಲ್ಲಿ ಬಾರದಿದ್ದರೆ ಬಿಲ್ಲು ಬಾಣಗಳಿಗೆ ಬೆಲೆ ಇರುತ್ತಿರಲಿಲ್ಲ. ಮರೆಯದಿರಿ. ಶಿವನು ಪತ್ನಿ ಪಾರ್ವತಿಗೋಸ್ಕರ ರಾಮನ ಕಥೆಯನ್ನು ಹೇಳಿ ಪ್ರಜಾ ಪಾಲನೆಯನ್ನು , ರಾಜ ತೀರ್ಪನ್ನು ಕೊಟ್ಟು ಕೃಪೆ ತೋರಿದ್ದಾನೆ. ಸದಾ ಕಾಲವೂ ರಾಮಧ್ಯಾನ ನಿಮ್ಮದಾಗಿರಲಿ. ಜಯ, ವಿಜಯ, ದಿಗ್ವಿಜಯ, ಅನಂತ ವಿಜಯಗಳು ನಿಮ್ಮನ್ನು ಹುಡುಕಿ ಬರಲಿವೆ. ರಾಮನನ್ನು ನೆನೆದರೆ ಹನುಮಂತನನ್ನು ನಿಮ್ಮ ಆತ್ಮದಲ್ಲಿ ಇರಿಸಿ, ನಿಮ್ಮನ್ನು ಶತ್ರುಗಳಿಂದ ಕಾಪಾಡುತ್ತಾನೆ.

ಮಕರ
ಇದ್ದುದನ್ನು ಬದಲಿಸಲಾಗುವುದಿಲ್ಲ, ಇಲ್ಲದ್ದನ್ನು ತಂದು ಕೊಡಲಾಗುವುದಿಲ್ಲ. ಅಂದರೆ ಶನಿಯು ಆತ್ಮಕಾರಕನಗಿದ್ದು ನಿಮ್ಮ ಕೆಲಸ ಕಾರ್ಯಗಳು ಸಾಗಬೇಕಾದರೆ ದೈವ ಕೃಪೆಯೊಂದೇ ದಾರಿ. ದೈವದಲ್ಲಿ ಸದೃಢವಾದ ಭಕ್ತಿ , ತ್ಯಾಗ, ಧೈರ್ಯ, ಅಲ್ಪ ತೃಪ್ತಿಯಲ್ಲಿ ಸಿಗುವ ಸಂತೋಷ ಬೇರೆಲ್ಲೂ ಸಿಗುವುದಿಲ್ಲ. ಕಷ್ಟವನ್ನು ಸಹಿಸಿಕೊಂಡು ನಡೆದ ದೈವ ಪುರುಷ ಶ್ರೀರಾಮನ ಧ್ಯಾನ ಮಾಡಿ. ಸುಖದ ಹಾದಿಯನ್ನು ಸೇರುತ್ತಿರಿ.

ಕುಂಭ
ಕುಂಭ ರಾಶಿಗೆ ದ್ವಾದಶದಲ್ಲಿ ಶನಿ, ದ್ವೀತಿಯದಲ್ಲಿ ಗುರುವು ಇದ್ದು ಶತ್ರು ಕಾಟ ಸಹಿಸಿಕೊಳ್ಳಲು ಶಕ್ತಿ ಕೊಡುತ್ತಾನೆ. ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡದೆ ನಿಮ್ಮನು ರಸುತ್ತಾನೆ. ದೈವವೆಂಬ ಊರುಗೋಲಿಲ್ಲದೆ ನಡೆಯಲು ಸಾಧ್ಯವೇ? ದೇವರನ್ನು ನಂಬಿ ಶಾಶ್ವತವಾದ ಕೀರ್ತಿ, ಯಶಸ್ಸನ್ನು ಸಂಪಾದಿಸಬಹುದು. ಕಹಿಯನ್ನು ನುಂಗಿ ಸುಖವನ್ನು ಹಂಚಿ ಎಂಬ ಉಕ್ತಿ ಮನದಾಳದಲ್ಲಿರಲಿ.

ಮೀನ
ಶನಿಯು ಏಕಾದಶದಲ್ಲಿ ಇದ್ದು, ಸುಖ ಸಂತೋಷಗಳನ್ನು ತರುತ್ತಾನೆ. ಲಗ್ನದಲ್ಲಿ ಗುರುವಿದ್ದು ಆರೋಗ್ಯದ ಬಗ್ಗೆ ಗಮನವಿರಲಿ. ಇಲ್ಲದ್ದಕ್ಕೆ ಚಿಂತಿಯು ಬೇಡ. ಕೃಷ್ಣಂ ಒಂದೇ ಜಗದ್ಗುರು ಎಂಬ ಶ್ಲೋಕವನ್ನು ಜ್ಞಾಪಿಸಿಕೊಳ್ಳಿ. ಕೃಷ್ಣಾಷ್ಟೋತ್ತರ ಪಠಿಸಿ. ಗುರು ದತ್ತಾತ್ರೇಯ ಚರಿತ್ರೆಯ 5ನೇ ಅಧ್ಯಾಯವನ್ನು ಪಾರಾಯಣ ಮಾಡಿ.

Leave a Comment

Your email address will not be published. Required fields are marked *