ಸಮಗ್ರ ನ್ಯೂಸ್: ಸುಳ್ಯ ನಗರದಲ್ಲಿ ಹಲವಾರು ಸಮಸ್ಯೆಗಳ ಜೊತೆಗೆ ಜನ ಬದುಕುತ್ತಿದ್ದಾರೆ. ಮನವಿ ಕೊಟ್ಟರೂ ಆಮೆ ನಡಿಗೆಯ ಅಭಿವೃದ್ಧಿ ಮಾಡುತ್ತಿರುವ ಸ್ಥಳೀಯ ನ.ಪಂ ಆಡಳಿತ ಜನರ ಸಮಸ್ಯೆಗಳನ್ನು ಆಲಿಸುವತ್ತ ಚಿಂತಿಸುತ್ತಿಲ್ಲ ಎಂಬುದು ನಗರವಾಸಿಗಳ ಆರೋಪ. ಆದರೆ ಕೆಲವೊಮ್ಮೆ ಇದರಿಂದ ಜನ ರೋಸಿ ಹೋದಾಗ ಜಾಲತಾಣಗಳಲ್ಲಿ ಸಮಸ್ಯೆಗಳ ಕುರಿತಂತೆ ಮಾತನಾಡುತ್ತಾರೆ. ಆದರೆ ನ.ಪಂ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಜನರನ್ನೇ ಅಪರಾದಿಗಳನ್ನಾಗಿ ಮಾಡುತ್ತಿದೆ. ಇದೀಗ ಮತ್ತೊಬ್ಬ ಯುವಕ ಸುಳ್ಯ ನ.ಪಂ ಆಡಳಿತದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
https://m.facebook.com/story.php?story_fbid=640038614142407&id=100044088233880&sfnsn=wiwspmo
https://m.facebook.com/story.php?story_fbid=639765824169686&id=100044088233880
ತನ್ನದೇ ಆದ ವಿಶೇಷ ಶೈಲಿಯಲ್ಲಿ ಸುಳ್ಯ ತಾಲೂಕಿನ ವಿವಿಧ ಸಮಸ್ಯೆಗಳನ್ನು ಜನರ ಮುಂದಿಡುತ್ತಿರುವ ಆರ್.ಜೆ ತ್ರಿಶೂಲ್ ಈ ಬಾರಿ ಸುಳ್ಯ ನಗರದ ಕಟ್ಟೆಕಾರ್ ಬಳಿಯಲ್ಲಿನ ಗುಂಡಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ‘ಪ್ರೇಮಿಗಳ ವೃತ್ತದಲ್ಲೊಂದು ಸೆಲ್ಪಿ’ ಎಂದು ಟ್ಯಾಗ್ ಮಾಡಿ ಶೇರ್ ಮಾಡಿದ್ದರು. ಇದು ವಿವಿಧ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಜನರೂ ಪೂರಕವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ಆದರೆ ಸುಳ್ಯ ನ.ಪಂ ಅಧ್ಯಕ್ಷರು ಮಾತ್ರ ಈ ಸಮಸ್ಯೆಗೆ ಸ್ಪಂದಿಸುವ ಬದಲು ಉದ್ದಟತನ ಮೆರೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟ ತ್ರಿಶೂಲ್ ರನ್ನು ನ.ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ‘ಕೀಬೋರ್ಡ್ ವಾರಿಯರ್’ ಎಂದು ಕರೆದಿದ್ದಾರೆ. ಇದು ತ್ರಿಶೂಲ್ ಮತ್ತು ನ.ಪಂ ಅಧ್ಯಕ್ಷರ ನಡುವೆ ಕಮೆಂಟ್ಸ್ ವಾರ್ ಗೆ ಕಾರಣವಾಗಿದೆ.
ಅಧ್ಯಕ್ಷರ ಕಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ತ್ರಿಶೂಲ್ ‘ಅಧ್ಯಕ್ಷರೇ ನಾನೂ ಸ್ಪಾಟ್ ಗೆ ಬರ್ತೇನೆ, ನೀವೂ ಬನ್ನಿ, ನಾವಿಬ್ಬರೂ ಕೀಬೋರ್ಡ್ ಬದಲು ಸ್ಕ್ರೀನ್ ಗೆ ಬರೋಣ, ನನ್ನ ಪ್ರಶ್ನೆಗಳಿಗೆ ಲೈವ್ ಉತ್ತರ ನೀಡಿ’ ಎಂದಿದ್ದಾರೆ.
ಈ ಹಿಂದೆಯೂ ನ.ಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಇಂತದ್ದೇ ಕಮೆಂಟ್ಸ್ ಗಳನ್ನು ಹಾಕಿ ರಾಜ್ಯ ವ್ಯಾಪಿ ಸುದ್ದಿಯಾಗಿದ್ದರು. ನ.ಪಂ ಎದುರಿನ ಕಸದ ರಾಶಿ ಬಗ್ಗೆ ನಟ ಅನಿರುದ್ ಹಾಕಿದ್ದ ಪೋಸ್ಟ್ ಗೆ ಇದೇ ರೀತಿಯ ಸ್ಟ್ರಾಂಗ್ ಕಮೆಂಟ್! ಮಾಡಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಮತ್ತೆ ಇರುವ ಸಮಸ್ಯೆಗಳನ್ನು ರಿಪೇರಿ ಮಾಡದೇ ಅದೇ ‘ಕೀಬೋರ್ಡ್’ ನಲ್ಲಿ ಕಮೆಂಟಿಸಿ ‘ಕೀಬೋರ್ಡ್ ಲೀಡರ್’ ಆಗಿದ್ದಾರೆ.